ಕಾಂಗ್ರೆಸ್ ನ ಅಭ್ಯರ್ಥಿಗಳ‌ ಎರಡನೇ ಪಟ್ಟಿ ಪ್ರಕಟ| ದ.ಕ, ಉಡುಪಿ, ಸೇರಿದಂತೆ ಬಾಕಿ ಕ್ಷೇತ್ರಗಳ ಅಭ್ಯರ್ಥಿ ಪಟ್ಟಿ ರಿವೀಲ್

ಸಮಗ್ರ ನ್ಯೂಸ್: ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, 57 ಅಭ್ಯರ್ಥಿಗಳ ಹೆಸರು ಅಂತಿಮವಾಗಿದೆ. ಕರ್ನಾಟಕದ 17 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿದೆ.

Ad Widget ... ..

ದಕ್ಷಿಣ ಕನ್ನಡಕ್ಕೆ ಪದ್ಮರಾಜ್‌, ಉಡುಪಿ ಚಿಕ್ಕಮಗಳೂರು ಕ್ಷೇತ್ರಕ್ಕೆ ಜಯಪ್ರಕಾಶ್ ಹೆಗ್ಡೆ, ಮೈಸೂರು – ಕೊಡಗಿಗೆ ಎಂ.ಲಕ್ಷ್ಮಣ್ ಹಾಗೂ ಕಲಬುರಗಿಯಲ್ಲಿ ರಾಧಾ ಕೃಷ್ಣ ದೊಡ್ಮನಿ ಸೇರಿದಂತೆ ರಾಜ್ಯದ 17 ಮಂದಿಗೆ ಟಿಕೆಟ್‌ ಘೋಷಿಸಿದೆ.

Ad Widget

ಲೋಕಸಭಾ ಚುನಾವಣೆ ಸಂಬಂಧ ಎಐಸಿಸಿ ಕಚೇರಿಯಲ್ಲಿ ಮಂಗಳವಾರ ನಡೆದ ಕಾಂಗ್ರೆಸ್ ಚುನಾವಣೆ ಸಮಿತಿ ಸಭೆಯಲ್ಲಿ ರಾಜ್ಯದ ಬಹುತೇಕ ಎಲ್ಲಾ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರುಗಳನ್ನು ಅಂತಿಮಗೊಳಿಸಲಾಗಿತ್ತು.

ರಾಜ್ಯದ ಅಭ್ಯರ್ಥಿಗಳ ಪಟ್ಟಿ ಈ ಕೆಳಗಿನಂತಿವೆ :

►ಬೆಂಗಳೂರು ಉತ್ತರ : ಪ್ರೊ. ರಾಜೀವ್‌ ಗೌಡ

►ಉಡುಪಿ – ಚಿಕ್ಕಮಗಳೂರು : ಜಯಪ್ರಕಾಶ್‌ ಹೆಗ್ಡೆ

►ಕೊಪ್ಪಳ : ರಾಜಶೇಖರ್ ಹಿಟ್ನಾಳ್

►ಉತ್ತರ ಕನ್ನಡ : ಅಂಜಲಿ ನಿಂಬಾಳ್ಕರ್

►ಬೆಂಗಳೂರು ಕೇಂದ್ರ : ಮನ್ಸೂರ್ ಖಾನ್

►ಬೆಂಗಳೂರು ದಕ್ಷಿಣ : ಸೌಮ್ಯ ರೆಡ್ಡಿ

►ಚಿತ್ರದುರ್ಗ : ಚಂದ್ರಪ್ಪ

►ಕೋಲಾರ : ಎಲ್‌ ಹನುಮಂತಯ್ಯ

►ಬೆಳಗಾವಿ : ಮೃಣಾಳ್‌ ಹೆಬ್ಬಾಳ್ಕರ್

►ಬಾಗಲಕೋಟೆ : ಸಂಯುಕ್ತಾ ಪಾಟೀಲ್

►ಚಿಕ್ಕೋಡಿ : ಪ್ರಿಯಾಂಕಾ ಜಾರಕಿಹೊಳಿ

►ಹುಬ್ಬಳ್ಳಿ-ಧಾರವಾಡ : ವಿನೋದ್‌ ಅಸೂಟಿ

►ದಾವಣಗೆರೆ : ಪ್ರಭಾ ಮಲ್ಲಿಕಾರ್ಜುನ್

►ಕಲಬುರಗಿ : ರಾಧಾಕೃಷ್ಣ ದೊಡ್ಮನಿ

►ದಕ್ಷಿಣ ಕನ್ನಡ : ಪದ್ಮರಾಜ್

►ಬೀದರ್ : ಸಾಗರ್‌ ಖಂಡ್ರೆ

►ರಾಯಚೂರು : ಕುಮಾರ್‌ ನಾಯ್ಕ್

►ಮೈಸೂರು – ಕೊಡಗು : ಎಂ.ಲಕ್ಷ್ಮಣ್

Leave a Comment

Your email address will not be published. Required fields are marked *