ಮೂರನೇ ಪಟ್ಟಿ ರಿಲೀಸ್ ಮಾಡಿದ ಬಿಜೆಪಿ/ ಕೊಯಮತ್ತೂರಿನಿಂದ ಅಣ್ಣಾಮಲೈಗೆ ಟಿಕೆಟ್

ಸಮಗ್ರ ನ್ಯೂಸ್: ಬಿಜೆಪಿ ಲೋಕಸಭಾ ಚುನಾವಣಾ ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆ ಮಾಡಿದ್ದು ತಮಿಳುನಾಡಿನ 9 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ, ತಮಿಳುನಾಡಿನ ಕೊಯಮತ್ತೂರಿನಿಂದ ನಿವೃತ್ತ ಪೊಲೀಸ್ ಅಧಿಕಾರಿ, ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರು ಸ್ಪರ್ಧೆ ಮಾಡಲಿದ್ದಾರೆ.

Ad Widget ... ..

ಈ ಹಿಂದೆ ತೆಲಂಗಾಣದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದ ಡಾ. ತಮಿಳ್ ಸಾಯಿ ಸೌಂದರ್ಯರಾಜನ್ ಗೆ ಚೆನೈ ದಕ್ಷಿಣದಿಂದ ಟಿಕೆಟ್ ನೀಡಲಾಗಿದೆ. ಎಲ್. ಮುರುಗನ್ ನೀಲಗಿರಿ ಕ್ಷೇತ್ರದಿಂದ, ಪೆÇನ್ನು ರಾಧಾಕೃಷ್ಣನ್ ಕನ್ಯಾಕುಮಾರಿಯಿಂದ ಸ್ಪರ್ಧೆ ಮಾಡಲಿದ್ದಾರೆ.

Ad Widget

ತಮಿಳುನಾಡಿನಲ್ಲಿ ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ಏಪ್ರಿಲ್ 19 ರಂದು ನಡೆಯಲಿದೆ. ಇದರ ಬೆನ್ನಲ್ಲಿಯೇ ತಮಿಳುನಾಡಿನ 9 ಕ್ಷೇತ್ರಗಳಿಗೆ ಬಿಜೆಪಿ ಹೆಸರನ್ನು ಅಂತಿಮ ಮಾಡಿದೆ.

Leave a Comment

Your email address will not be published. Required fields are marked *