ಬಂಟ್ವಾಳ: ಸುಳ್ಳು ವಾಟ್ಸಪ್ ಸಂದೇಶ|ಲಕ್ಷಾಂತರ ರೂ. ಕಳೆದುಕೊಂಡ ಆಟೋ ಚಾಲಕ..!

ಸಮಗ್ರ ನ್ಯೂಸ್‌ : ಅಪರಿಚಿತ ವಾಟ್ಸಪ್ ಸಂದೇಶ ನಂಬಿ ಆಫ್ ಡೌನ್ ಲೋಡ್ ಮಾಡಿಕೊಂಡು ಹಣ ಹೂಡಿಕೆ ಮಾಡಿದ ಆಟೋ ರಿಕ್ಷಾ ಚಾಲಕ ಲಕ್ಷಾಂತರ ರೂಪಾಯಿ ಕಳೆದುಕೊಂಡ ಘಟನೆ ಬಂಟ್ವಾಳ ಸರಪಾಡಿ ಗ್ರಾಮದಲ್ಲಿ ನಡೆದಿದೆ.

Ad Widget ... ..

ಸರಪಾಡಿ ಗ್ರಾಮದ ನಿವಾಸಿ ಹರೀಶ್ ಕುಮಾರ್ (33) ವಂಚನೆಗೊಳಗಾದ ವ್ಯಕ್ತಿ. ಸರಪಾಡಿ ಗ್ರಾಮದ ನಿವಾಸಿ ಹರೀಶ್ ಕುಮಾರ್ (33) ಎಂಬವರು ಆಟೋ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು, ಅವರ ಮೊಬೈಲಿಗೆ 2023 ರ ಡಿಸೆಂಬರ್ 20 ರಂದು ಅಪರಿಚಿತ ವಾಟ್ಸಪ್ ನಿಂದ ಬಂದ ಸೂಚನೆಯಂತೆ, NumGenius A1 APP ನ್ನು ಡೌನ್‌ಲೋಡು ಮಾಡಿಕೊಂಡಿರುತ್ತಾರೆ. ಆ ಆಪ್ ಮೂಲಕ ಹಣವನ್ನು ಹೂಡಿಕೆ ಮಾಡಿ ಲಾಭಗಳಿಸುವ ಉದ್ದೇಶದಿಂದ ಅಪರಿಚಿತ ವಾಟ್ಸಪಿನಲ್ಲಿ ಸೂಚಿಸಿದ ವಿವಿಧ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು 5,85,200/- ರೂಪಾಯಿ ಹಣವನ್ನು ವರ್ಗಾಯಿಸಿರುತ್ತಾರೆ.

Ad Widget

ಈ ಪೈಕಿ 1,20,175/- ಹಣವನ್ನು ಹಿಂತಿರುಗಿಸಿದ್ದು, ಬಾಕಿ 4,65,025/- ರೂಪಾಯಿ ಹಣವನ್ನು ವಾಪಾಸು ನೀಡದೆ ಮೋಸ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ನಡೆಸುತಿದ್ದಾರೆ.

Leave a Comment

Your email address will not be published. Required fields are marked *