ಅಪ್ರಾಪ್ತ ಬಾಲಕ ಚಲಾಯಿಸುತ್ತಿದ್ದ ಕಾರು ಪಲ್ಟಿ| ಇಬ್ಬರು ಮಹಿಳೆಯರು ಗಂಭೀರ

ಸಮಗ್ರ ನ್ಯೂಸ್:ಅಪ್ರಾಪ್ತ ಬಾಲಕನೋರ್ವ ಚಲಾಯಿಸುತ್ತಿದ್ದ ಕಾರು ನಿಯಂತ್ರಣ ಕಳೆದುಕೊಂಡ ಪರಿಣಾಮ ರೆಸಾರ್ಟ್ ವೊಂದರ ಕಾಂಪೌಂಡ್ ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಇಬ್ಬರು ಮಹಿಳೆಯರು ಗಂಭೀರ ಗಾಯಗೊಂಡಿರುವ ಘಟನೆ ಸುಂಟಿಕೊಪ್ಪ ಸಮೀಪದ ಹೇರೂರು ಜಂಗಲ್ ರೆಸಾರ್ಟ್ ನ ಸಮೀಪದಲ್ಲಿ ಮಾ.17ರಂದು ಸಂಜೆ ಸಂಭವಿಸಿದೆ.

. Ad Widget . Ad Widget . Ad Widget

7ನೇ ಹೊಸಕೋಟೆ ಕಲ್ಲೂರು ಗ್ರಾಮದ ಅಬ್ಬಾಸ್ ಎಂಬುವವರ ಅಪ್ರಾಪ್ತ ಪುತ್ರ ಆಲ್ಟೊ ಕಾರು ಅನ್ನು ಬಾಡಿಗೆಗೆ ಪಡೆದುಕೊಂಡಿದ್ದಾನೆ. ಈತ ಕಾರನ್ನು ಚಲಾಯಿಸಿಕೊಂಡು ಬಸವನಹಳ್ಳಿ ಮಾರ್ಗವಾಗಿ ಅತೀ ವೇಗದಿಂದ ಬಂದಿದ್ದಾನೆ. ಆದರೆ ಅದಾಗಲೇ ನಿಯಂತ್ರಣ ಕಳೆದುಕೊಂಡಿದ್ದ ಕಾರು ರಸ್ತೆಯ ಇನ್ನೊಂದು ಬದಿಯಲ್ಲಿರುವ ರೆಸಾರ್ಟ್ ನ ವಾಹನ ಪಾರ್ಕಿಂಗ್ ಮಾಡುವ ಸ್ಥಳದಲ್ಲಿನ ಕಾಂಪೌಂಡ್ ಗೆ ಅಪ್ಪಳಿಸಿ ರಸ್ತೆಯಲ್ಲಿ ಮೂರು ಸಲ ಪಲ್ಟಿ ಹೊಡೆದಿದೆ. ಈ ಸಂದರ್ಭ ರೆಸಾರ್ಟ್ ನ ವಾಹನ ಪಾರ್ಕಿಂಗ್ ಮಾಡುವ ಸ್ಥಳದಲ್ಲಿ ಕಾಂಪೌಂಡ್ ಸಮೀಪ ಕರ್ತವ್ಯ ನಿರತರಾಗಿದ್ದ ಇಬ್ಬರು ಮಹಿಳಾ ಸಿಬ್ಬಂದಿಗಳಿಗೆ ಕೂಡ ಕಾರು ಡಿಕ್ಕಿಯಾಗಿದ್ದು, ಗಂಭೀರವಾಗಿ ಗಾಯಗೊಂಡು ಚಿಂತಾಜನಕರಾಗಿರುವ ಇವರನ್ನು ಮೈಸೂರು ಆಸ್ಪತ್ರೆಗೆ ರವಾನಿಸಲಾಗಿದೆ. ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

. Ad Widget .

Leave a Comment

Your email address will not be published. Required fields are marked *