Ad Widget .

ಬೀಫ್ ರಪ್ತಿನಲ್ಲಿ‌ 2ನೇ ಸ್ಥಾನಕ್ಕೇರಿದ ಭಾರತ

ಸಮಗ್ರ ವಾರ್ತೆ: 2023ರಲ್ಲಿ ಬೀಫ್ ರಫ್ತುದಾರರ ಪೈಕಿ ಭಾರತ ಮತ್ತೊಂದು ಪ್ರಮುಖ ರಫ್ತು ದೇಶವಾಗಿ ಹೊರ ಹೊಮ್ಮಿದ್ದು, ಕೋಣದ ಮಾಂಸವನ್ನು ರಫ್ತು ಮಾಡುತ್ತಿದೆ. ಭಾರತದ ನಂತರದ ಸ್ಥಾನದಲ್ಲಿ ಅಮೆರಿಕಾ ಮತ್ತು ಆಸ್ಟ್ರೇಲಿಯಾ ದೇಶಗಳಿವೆ. ಮೊದಲನೇ ಸ್ಥಾನವನ್ನು ಬ್ರೆಝಿಲ್ ಪಡೆದಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಅತೀ ಹೆಚ್ಚು ಬೀಫ್ ಉತ್ಪಾದನೆಯಲ್ಲಿ ಅಮೆರಿಕಾ ಅಗ್ರ ಕ್ರಮಾಂಕದಲ್ಲಿದ್ದು, ಅದು ಉತ್ಪಾದಿಸುವ ಬಹುತೇಕ ಬೀಫ್ ಅನ್ನು ದೇಶೀಯ ಬಳಕೆಗೇ ಮಾರಾಟ ಮಾಡುತ್ತದೆ ಎಂದು thewire ವರದಿ ಮಾಡಿದೆ.

Ad Widget . Ad Widget . Ad Widget .

2023ರ ಎಪ್ರಿಲ್ ವರೆಗೆ ಭಾರತವು 14.75 ಲಕ್ಷ ಟನ್ ಗಳಷ್ಟು ಬೀಫ್ ರಫ್ತು ಮಾಡಿದೆ. ಇಷ್ಟು ಬೃಹತ್ ಪ್ರಮಾಣದಲ್ಲಿ ಬೀಫ್ ರಫ್ತು ಮಾಡಿ ಜಗತ್ತಲ್ಲೇ 2ನೇಕ್ಕೇರಿದೆ. ಜಗತ್ತಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಬೀಫ್ ರಫ್ತು ಮಾಡುವ ದೇಶ ಬ್ರೆಝಿಲ್ 2023ರ ಎಪ್ರಿಲ್ ವೇಳೆಗೆ 30 ಲಕ್ಷ ಟನ್ ಗಳಷ್ಟು ಬೀಫ್ ರಫ್ತು ಮಾಡಿತ್ತು. 14 ಲಕ್ಷದ 22 ಸಾವಿರ ಟನ್ ಬೀಫ್ ರಫ್ತು ಮಾಡುವ ಮೂಲಕ ಅಮೆರಿಕ ಮೂರನೆ ಸ್ಥಾನದಲ್ಲಿದ್ದರೆ, 14 ಲಕ್ಷ ಟನ್ ರಫ್ತು ಮಾಡಿರುವ ಆಸ್ಟ್ರೇಲಿಯಾ 4ನೆ ಸ್ಥಾನದಲ್ಲಿದೆ. ಭಾರತವು 2022ರಲ್ಲಿ 11 ಲಕ್ಷದ 75 ಸಾವಿರ ಟನ್ ಗಳಷ್ಟು ಬೀಫ್ ರಫ್ತು ಮಾಡಿತ್ತು ಎಂದು ಅಮೆರಿಕದ ಕೃಷಿ ಇಲಾಖೆ ನೀಡಿದ ವರದಿಯಲ್ಲಿರುವ ಅಂಕಿ ಅಂಶಗಳು ತಿಳಿಸಿದೆ.

Leave a Comment

Your email address will not be published. Required fields are marked *