ವಾರ್ಷಿಕೋತ್ಸವದ ದಿನ ಗಿಫ್ಟ್ ನೀಡಿಲ್ಲ ಎಂದು ಪತಿಗೆ ಚೂರಿ ಇರಿದ ಪತ್ನಿ

ಸಮಗ್ರ ನ್ಯೂಸ್: ವಾರ್ಷಿಕೋತ್ಸವದ ದಿನ ತನಗೆ ಗಿಫ್ಟ್ ನೀಡಿಲ್ಲ ಎಂಬ ಕಾರಣಕ್ಕೆ ಕೋಪಗೊಂಡ ಪತ್ನಿ ಮಲಗಿದ್ದ ಪತಿಯನ್ನು ಚಾಕುವಿನಿಂದ ಇರಿದ ಘಟನೆ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ನಡೆದಿದೆ.

Ad Widget ... ..

ಕೆಲಸದ ಒತ್ತಡದಲ್ಲಿದ್ದ ಗಂಡ ಇದನ್ನೆಲ್ಲ ಮರೆತಿದ್ದು ಮನೆಗೆ ಬಂದ ತಕ್ಷಣ ಹೋಗಿ ಮಲಗಿದ್ದಾನೆ. ಇದರಿಂದ ಕೋಪಗೊಂಡ ಹೆಂಡತಿ ಗಂಡನ ಮೇಲೆ ಚಾಕು ಇರಿದಿದ್ದಾಳೆ. ಎಫ್ಐಆರ್ ಪ್ರಕಾರ ಫೆ. 27ರಂದು ಬೆಂಗಳೂರಿನ ಪಾರ್ಥ ಪ್ರತಿಮ್ (37) ಅವರನ್ನು ಪತ್ನಿ ರಿಯಾ ಘೋಷ್ (35) ಎಂಬಾಕೆ ಚಾಕುವಿನಿಂದ ಇರಿದಿರುವ ಕುರಿತು ವರದಿಯಾಗಿದೆ. ಸಂತ್ರಸ್ತೆಯ ದೂರಿನ ನಂತರ ಕೊಲೆ ಯತ್ನಕ್ಕೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 307 ರ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.

Ad Widget

Leave a Comment

Your email address will not be published. Required fields are marked *