Ad Widget .

ಪರೀಕ್ಷೆ ಮುಗಿದ ಮರುದಿನ ಫಲಿತಾಂಶ/ ದಾಖಲೆ ನಿರ್ಮಿಸಿದ ಕೊಡಗು ವಿಶ್ವವಿದ್ಯಾನಿಲಯ

ಸಮಗ್ರ ನ್ಯೂಸ್: ಕೊಡಗು ವಿಶ್ವವಿದ್ಯಾನಿಲಯ ಮತ್ತು ಸಂಯೋಜಿತ ಕಾಲೇಜುಗಳಲ್ಲಿ 2023-24ನೇ ಶೈಕ್ಷಣಿಕ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಬಿಎ, ಬಿಕಾಂ, ಬಿಬಿಎ, ಬಿಸಿಎ ಮತ್ತು ಬಿಎಸ್‍ಸಿ ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿಗಳ ಮೊದಲ ಸೆಮಿಸ್ಟರ್ ಪರೀಕ್ಷೆಯ ಪತ್ರಿಕೆಗಳ ಮೌಲ್ಯಮಾಪನ ಪೂರ್ಣಗೊಂಡಿದೆ. ಬಿಬಿಎ, ಬಿಸಿಎ ಮತ್ತು ಬಿಎಸ್‍ಸಿ ಫಲಿತಾಂಶವನ್ನು ಮಾರ್ಚ್ 5 ರಂದು ಘೋಷಿಸಲಾಯಿತು. ಬಿಎ ಪದವಿಯ ಫಲಿತಾಂಶವನ್ನು ಸಹ ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಕೊಡಗು ವಿವಿ ತಿಳಿಸಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಕೊಡಗು ವಿಶ್ವವಿದ್ಯಾನಿಲಯದ ನೂತನ ವಿದ್ಯಾರ್ಥಿಗಳ ಪ್ರಥಮ ಸೆಮಿಸ್ಟರ್ ಪರೀಕ್ಷೆಗಳು ಜನವರಿ 25 ರಂದು ಪ್ರಾರಂಭವಾಗಿದ್ದು, ಮಾರ್ಚ್ 4 ರಂದು ಅಂತಿಮ ಪದವಿ ಪರೀಕ್ಷೆಗಳು ಮುಕ್ತಾಯಗೊಂಡವು. ಎಫ್‍ಎಂಕೆಎಂಸಿ ಕಾಲೇಜು ಮಡಿಕೇರಿ, ಏಕೀಕೃತ ವಿಶ್ವವಿದ್ಯಾಲಯದಲ್ಲಿ ವ್ಯವಸ್ಥಿತವಾಗಿ ಮೌಲ್ಯಮಾಪನ ಕೇಂದ್ರವನ್ನು ಸ್ಥಾಪಿಸಿ, ಇದರಲ್ಲಿ ಜಿಲ್ಲೆಯ ವಿವಿಧ ಕಾಲೇಜುಗಳ ತಜ್ಞ ಮೌಲ್ಯಮಾಪಕರು ಸಕ್ರಿಯವಾಗಿ ಪಾಲ್ಗೊಂಡು ಈ ಮೌಲ್ಯಮಾಪನ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ ಎಂದು ವಿವಿಯ ಆಡಳಿತ ಮಂಡಳಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Ad Widget . Ad Widget . Ad Widget .

ಅಷ್ಟೇ ಅಲ್ಲದೆ ಕೊಡಗು ವಿಶ್ವವಿದ್ಯಾನಿಲಯವು 2023-2024ನೇ ಶೈಕ್ಷಣಿಕ ವರ್ಷದ ಮೊದಲ ಸೆಮಿಸ್ಟರ್ ಫಲಿತಾಂಶಗಳನ್ನು ಪ್ರಕಟಿಸಿದ ರಾಜ್ಯದ ಮೊದಲ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

Leave a Comment

Your email address will not be published. Required fields are marked *