ಸಮಗ್ರ ನ್ಯೂಸ್: ಬಿಬಿಸಿಯ ನೂತನ ಅಧ್ಯಕ್ಷರಾಗಿ ಭಾರತ ಮೂಲದ ಮಾಧ್ಯಮ ಕಾರ್ಯನಿರ್ವಾಹಕ ಡಾ. ಸಮೀರ್ ಶಾ ಅವರನ್ನು ನೇಮಕ ಮಾಡಲಾಗಿದೆ. 40 ವರ್ಷಗಳ ಕಾಲ ಯುಕೆ ಪ್ರಸಾರದಲ್ಲಿ ಕೆಲಸ ಮಾಡಿದ ಶಾ ಅವರನ್ನು ಕಳೆದ ವರ್ಷ ಡಿಸೆಂಬರ್ನಲ್ಲಿ ಸರ್ಕಾರದ ಆದ್ಯತೆಯ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ. ಹೌಸ್ ಆಫ್ ಕಾಮನ್ಸ್ ಮೀಡಿಯಾ ಕಲ್ಕರ್, ಮೀಡಿಯಾ ಮತ್ತು ಸ್ಪೋರ್ಟ್ ಸೆಲೆಕ್ಟ್ ಕಮಿಟಿಯ ಕ್ರಾಸ್-ಪಾರ್ಟಿ ಸಂಸದರು ನೇಮಕಾತಿ ಪೂರ್ವ ಪರಿಶೀಲನೆ ನಡೆಸಿದ್ದಾರೆ.
72 ವರ್ಷ ವಯಸ್ಸಿನ ಶಾ ಅವರು ನಾಲ್ಕು ವರ್ಷಗಳ ಅವಧಿಯ ಪಾತ್ರದಲ್ಲಿ ಸಾರ್ವಜನಿಕ ಪ್ರಸಾರಕರ ಮೊದಲ ಭಾರತೀಯ ಮೂಲದ ಅಧ್ಯಕ್ಷರಾಗಿ ಮಾರ್ಚ್ 4 ರಿಂದ ಮಾರ್ಚ್ 2028 ರವರೆಗೆ ಕಾರ್ಯನಿರ್ವಹಿಸಲಿದ್ದಾರೆ.
ಟಿವಿ ನಿರ್ಮಾಣ ಮತ್ತು ಪತ್ರಿಕೋದ್ಯಮದಲ್ಲಿ 40 ವರ್ಷಗಳಿಗಿಂತ ಹೆಚ್ಚು ವೃತ್ತಿಜೀವನ ಹೊಂದಿರುವ ಡಾ. ಶಾ ಅವರು ಬಿಬಿಸಿ ಅಧ್ಯಕ್ಷ ಸ್ಥಾನಕ್ಕೆ ಅನುಭವ ಹೊಂದಿದ್ದಾರೆ ಎಂದು ಯುಕೆ ಸಂಸ್ಕøತಿ ಕಾರ್ಯದರ್ಶಿ ಲೂಸಿ ಪ್ರೇಜರ್ ಆಯ್ಕೆಯನ್ನು ಘೋಷಿಸಿದ್ದಾರೆ.