ಬಜೆಟ್ ಅಧಿವೇಶನದಲ್ಲಿ ಭಾಗವಹಿಸಲು ಹೇಮಂತ್ ಸೊರೇನ್‍ಗೆ ಅನುಮತಿ ನಿರಾಕರಣೆ

ಸಮಗ್ರ ನ್ಯೂಸ್: ಜಾಖರ್ಂಡ್‍ನ ಬಜೆಟ್ ಅಧಿವೇಶನದಲ್ಲಿ ಭಾಗವಹಿಸಲು ಅನುಮತಿ ಕೋರಿದ್ದ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರಿಗೆ ಇಲ್ಲಿನ ವಿಶೇಷ ಪಿಎಂಎಲ್‍ಎ ನ್ಯಾಯಾಲಯ ಗುರುವಾರ ಅನುಮತಿ ನಿರಾಕರಿಸಿದೆ.

Ad Widget ... ..

ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸೊರೇನ್ ಅವರನ್ನು ಜಾರಿ ನಿರ್ದೇಶನಾಲಯ ಜನವರಿ 31ರಂದು ಬಂಧಿಸಿತ್ತು. ಇ.ಡಿ ಕಸ್ಟಡಿ ಅವಧಿ ಮುಗಿದ ಬಳಿಕ ಫೆ.15ರಂದು ಸೊರೇನ್ ಅವರನ್ನು ಬಿರ್ಸಾ ಮುಂಡಾ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ.

Ad Widget

ಫೆ. 5ರಂದು ವಿಧಾನಸಭೆಯಲ್ಲಿ ನಡೆದಿದ್ದ ವಿಶ್ವಾಸಮತ ಯಾಚನೆ ವೇಳೆ ಭಾಗವಹಿಸಲು ಸೊರೇನ್ ಅವರಿಗೆ ಈ ಹಿಂದೆ ನ್ಯಾಯಾಲಯ ಅವಕಾಶ ನೀಡಿತ್ತು.

Leave a Comment

Your email address will not be published. Required fields are marked *