Ad Widget .

ಉದ್ಯಮಿ ರಿಚರ್ಡ್ ಬ್ರಾನ್ಸನ್ ಜೊತೆ ಭಾರತೀಯ ಮೂಲದ ಸಿರಿಶಾ ಬಾಂದ್ಲಾ ಬಾಹ್ಯಾಕಾಶಕ್ಕೆ

ವಾಷಿಂಗ್ಟನ್: ಹೆಸರಾಂತ ಉದ್ಯಮಿ ರಿಚರ್ಡ್ ಬ್ರಾನ್ಸನ್ ಅವರ ಜೊತೆ ಭಾರತೀಯ ಮೂಲದ ಏರೋನಾಟಿಕಲ್ ಎಂಜಿನಿಯರ್ ಸಿರಿಶಾ ಬಾಂದ್ಲಾ ಇಂದು ಬಾಹ್ಯಕಾಶಕ್ಕೆ ಹಾರಲಿದ್ದಾರೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

Ad Widget . Ad Widget . Ad Widget .

ಈ ಮೂಲಕ ಸ್ಪೇಸ್ ಟೂರಿಸಮ್ ಕನಸು ಕಂಡಿರುವ ಹೆಸರಾಂತ ವೇಲ್ದಿ ಡೇರ್ ಡೆವಿಲ್ ಮೊಘಲ್’ ವರ್ಜಿನ್ ಕಂಪನಿ ರಿಚರ್ಡ್ ಬ್ರಾನ್ಸನ್ ಅವರ 10 ವರ್ಷಗಳ ಕನಸು ಇಂದು ನನಸಾಗಲಿದೆ. ರಿಚರ್ಡ್ ಬ್ರಾನ್ಸನ್ ಜೊತೆಗೆ ಭಾರತೀಯ ಮೂಲದ ಏರೋನಾಟಿಕಲ್ ಎಂಜಿನಿಯರ್ 34ರ ಹರೆಯದ ಸಿರಿಶಾ ಬಾಂದ್ಲಾ ಸಹ ವರ್ಜಿನ್ ಗ್ಯಾಲಕ್ಟಿಕ್ ಗಗನ ನೌಕೆಯೊಂದಿಗೆ ಬಾಹ್ಯಾಕಾಶಕ್ಕೆ ಹಾರಲು ಸಜ್ಜಾಗಿದ್ದಾರೆ. ಕಲ್ಪನಾ ಚಾವ್ಲಾ ಮತ್ತು ಸುನೀತಾ ವಿಲಿಯಮ್ಸ್ ನಂತರ ಸಿರಿಶಾ ಬಾಹ್ಯಾಕಾಶಕ್ಕೆ ಹಾರುತ್ತಿರುವ ಮೂರನೇ ಭಾರತೀಯ ಮೂಲದ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ವರ್ಜಿನ್ ಗ್ಯಾಲಾಕ್ಟಿಕ್ ಹೋಲ್ಡಿಂಗ್ ಕಂಪನಿ ನಾಳೆ ಮೊದಲ ಪ್ರಯಾಣಿಕರ ಸ್ಪೇಸ್ ರಾಕೆಟ್ ಅನ್ನು ಲಾಂಚ್ ಮಾಡುತ್ತಿದೆ. ‘ವಿಎಸ್‍ಎಸ್ ಯುನಿಟಿನಿಟಿ’ ಗಗನ ನೌಕೆಯಲ್ಲಿ ಪ್ರಯಾಣಿಸಲಿರುವ ಆರು ಗಗನಯಾತ್ರಿಗಳಲ್ಲಿ ಇಬ್ಬರು ಮಹಿಳೆಯರಿದ್ದು, ಅದರಲ್ಲಿ ಸಿರಿಶಾ ಕೂಡ ಒಬ್ಬರಾಗಿದ್ದಾರೆ.

90 ನಿಮಿಷಗಳ ಈ ಮಹಾತ್ಸಾಧನೆಯಲ್ಲಿ ಎಲ್ಲವೂ ಸರಿಯಾದರೆ ನ್ಯೂ ಮೆಕ್ಸಿಕೋ ಮರಳುಗಾಡಿನ ಮೇಲೆ ಭೂಮಿಯ ಪರಿಧಿಯಿಂದ 50 ಮೈಲಿ ಎತ್ತರಕ್ಕೆ ಯುನಿಟಿ-22 ರಾಕೆಟ್ ಹಾರಲಿದೆ. ಇಬ್ಬರು ಪೈಲಟ್‍ಗಳು, ರಿಚರ್ಡ್ ಬ್ರಾನ್ಸನ್ ಸೇರಿ ನಾಲ್ವರು ತರಬೇತಿ ಹೊಂದಿರುವ ತಜ್ಞರು ಸ್ಪೇಸ್ ಸ್ಟೇಷನ್ ಅಂಚಿನಲ್ಲಿ ಕೆಲ ನಿಮಿಷ ರೋಚಕ ಅನುಭವ ಅನುಭವಿಸಲಿದ್ದಾರೆ.

Leave a Comment

Your email address will not be published. Required fields are marked *