ಉಡುಪಿ:ಖಾಸಗಿ ಬಸ್ ಚಾಲಕರಿಗೆ ಚೂರಿ ಇರಿತ

ಸಮಗ್ರ ನ್ಯೂಸ್: ಖಾಸಗಿ ಬಸ್ ಚಾಲಕರಿಬ್ಬರಿಗೆ ತಂಡವೊಂದು ಚೂರಿ ಇಂದ ಇರಿದ ಘಟನೆ ಜ. 18ರಂದು ರಾತ್ರಿ ಬನ್ನಂಜೆಯಲ್ಲಿ ನಡೆದಿದೆ.

Ad Widget ... ..

ಉಡುಪಿ ಸಿಟಿ ಬಸ್ ಚಾಲಕರ ನಡುವೆ ಗಲಾಟೆ ನಡೆದಿತ್ತು. ಈ ಕಾರಣಕ್ಕೆ ಈ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಜೆಎಮ್‌ಟಿ ಬಸ್‌ ಚಾಲಕರಾದ ಸಂತೋಷ ಹಾಗೂ ಶಿಶರ್ ಕೆಲಸ ಮುಗಿಸಿ ಬನ್ನಂಜೆ ಕಡೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ರಿಕ್ಷಾದಲ್ಲಿ ಬಂದಿದ್ದ ಖಾಸಗಿ ಬಸ್ ವೊಂದರ ಮ್ಯಾನೇಜರ್ ಹಾಗೂ ಚಾಲಕರಾದ ಬುರನ್ ಮತ್ತು ಸುದೀಪ್ ಅಡ್ಡಗಟ್ಟಿ ಚೂರಿ ಇರಿದಿದ್ದಾರೆ ಎಂದು ತಿಳಿದು ಬಂದಿದೆ. ರಾತ್ರಿ ಮೂವರಿದ್ದ ತಂಡವು ಈ ಕೃತ್ಯ ಎಸಗಿದ್ದು, ಗಾಯಳು ಬಸ್ ಚಾಲಕರು ಅಜ್ಜರಕಾಡು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Ad Widget

Leave a Comment

Your email address will not be published. Required fields are marked *