ವಿಟ್ಲ: ಯುವಕನಿಗೆ ಚೂರಿ ಇರಿತ


ಬಂಟ್ವಾಳ: ಯುವಕನೋರ್ವನಿಗೆ ತಂಡವೊಂದು ಚೂರಿಯಿಂದ ಇರಿದು ಪರಾರಿಯಾದ ಘಟನೆ ತಾಲೂಕಿನ ಕೊಳ್ನಾಡು ಗ್ರಾಮದ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕಾಡುಮಠ ಎಂಬಲ್ಲಿ ರವಿವಾರ ನಡೆದಿದೆ.

. Ad Widget . Ad Widget . Ad Widget

ಹಲ್ಲೆ ಮತ್ತು ಚೂರಿ ಇರಿತದಿಂದ ಕೊಳ್ನಾಡು ಗ್ರಾಮದ ಕಾಡುಮಠ ನಿವಾಸಿ ಅಬ್ದುಲ್ ಹಾರಿಸ್(29). ಗಾಯಗೊಂಡಿದ್ದ ಈತನನ್ನು ವಿಟ್ಲ ಸಮುದಾಯ ಆರೋಗ್ಯ ಕೇಂದ್ರದಕ್ಕೆ ದಾಖಲಿಸಲಾಗಿದೆ. ಹಲ್ಲೆ ನಡೆಸಿದ ತಂಡದಲ್ಲಿ ನಾಲ್ವರು ಇದ್ದರು ಎನ್ನಲಾಗಿದ್ದು, ಕಾಡುಮಠ ನಿವಾಸಿಗಳಾದ ಅವಿನಾಶ್, ವಿನೀತ್, ದಿನೇಶ್, ಮತ್ತೊಬ್ಬ ಅಪರಿಚಿತ ವ್ಯಕ್ತಿ ವಿರುದ್ಧ ಹಾರಿಸ್ ದೂರು ನೀಡಿದ್ದಾರೆ.

. Ad Widget .

ಅಬ್ದುಲ್ ಹ್ಯಾರಿಸ್ ಅವರು ಸಾಲೆತ್ತೂರಿನಿಂದ ತನ್ನ ಮನೆಗೆ ಬೈಕ್ ನಲ್ಲಿ ಬರುತ್ತಿದ್ದಾಗ ಹಿಂದಿನಿAದ ಬಂದ ತಂಡ ಬೈಕ್ ನಿಲ್ಲಿಸಿ ಹಾರೀಸ್ ಅವರ ದ್ವಿಚಕ್ರ ವಾಹನವನ್ನು ನಿಲ್ಲಿಸಿದ್ದಾರೆ. ಬಳಿಕ ಅವರು ಕೈಯಿಂದ ಹೊಡೆದು, ಬೈಕಿನಿಂದ ದೂಡಿಹಾಕಿದ್ದಾರೆ. ಬಳಿಕ ಅವಿನಾಶ್ ಎಂಬಾತ ಚೂರಿಯಿಂದ ಹಾರೀಸ್ ಅವರ ಬೆನ್ನಿಗೆ ಚುಚ್ಚಿದ್ದಾರೆ. ಬಳಿಕ ನೀನು ನಮ್ಮ ತಂಟೆಗೆ ಬಂದರೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ತೆರಳಿದ್ದಾರೆ.

ಈ ಹಲ್ಲೆಗೆ ಕೆಲ ಸಮಯದ ಹಿಂದೆ ಅವಿನಾಶನ ತಂಗಿಗೆ ಕೀಟಲೆ ಮಾಡಿದ್ದಾನೆ ಎಂದು ಹಾರೀಸ್ ವಿರುದ್ಧ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಹಳೆ ದ್ವೇಷದಿಂದ ಈ ಹಲ್ಲೆ ನಡೆದಿದೆ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Comment

Your email address will not be published. Required fields are marked *