ಸಮಗ್ರ ನ್ಯೂಸ್: ಗುತ್ತಿಗಾರಿನ ಎಸ್.ಎಂ.ಎಸ್.ಜಿ. ಕಾಂಪ್ಲೆಕ್ಸ್ ನಲ್ಲಿ ಹೋಟೇಲ್ ರಜತ ಡಿ.15 ರಂದು ಶುಭಾರಂಭಗೊಂಡಿದ್ದು, ಉತ್ತಮ ದರ್ಜೆಯ ವಿವಿಧ ಶೈಲಿಯ ತಿಂಡಿ ತಿನಿಸುಗಳು ಇನ್ಮುಂದೆ ಒಳ್ಳೆಯ ದರದಲ್ಲಿ ಲಭ್ಯವಾಗಲಿದೆ.
ಬೆಳಗ್ಗೆ ಶುಭಾರಂಭ ಪ್ರಯುಕ್ತ ಗಣಹವನ ನಡೆಯಿತು. ಈ ಸಂದರ್ಭ ವೆಂಕಟ್ ವಳಲಂಬೆ, ವೆಂಕಟ್ ದಂಬೆಕೋಡಿ, ಬೆಳ್ಯಪ್ಪ ಗೌಡ ಕಡ್ತಲ್ ಕಜೆ, ಜಯಮ್ಮ ಬಲ್ನಾಡು, ಉಮೇಶ ಬಲ್ನಾಡು, ಚಂದ್ರಾವತಿ ಕಲ್ಲುಗುಂಡಿ ಮತ್ತಿತರರು ಉಪಸ್ಥಿತರಿದ್ದರು.
ಹೋಟೇಲ್ ರಜತದಲ್ಲಿ ಜ್ಯೂಸ್ & ಚಾಟ್ಸ್, ವೆಜ್ & ನಾನ್ವೆಜ್, ಚೈನೀಸ್ ಫುಡ್ ಐಟಂಗಳು, ಉಪಹಾರ, ಊಟದ ವ್ಯವಸ್ಥೆ ದೊರೆಯಲಿದೆ. ಅಲ್ಲದೆ ಸಭೆ ಸಮಾರಂಭಗಳಿಗೆ ಬೇಕಾದ ಕ್ಯಾಟರಿಂಗ್ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಮಾಲಕ ರವೀಂದ್ರ ಬಲ್ನಾಡು ತಿಳಿಸಿದ್ದಾರೆ.