Ad Widget .

ಕುಕ್ಕೆ: ಚಂಪಾಷಷ್ಟಿ ಮಹೋತ್ಸವ ಹಿನ್ನಲೆ| ಅನ್ಯಮತೀಯರಿಗೆ ಸಂತೆ ವ್ಯಾಪಾರ ಅವಕಾಶ ನೀಡದಂತೆ ಮನವಿ

ಸಮಗ್ರ ನ್ಯೂಸ್: ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ
ಚಂಪಾಷಷ್ಠಿ ಮಹೋತ್ಸವದ ಸಂದರ್ಭದಲ್ಲಿ ಸಂತೆ ವ್ಯಾಪಾರ ನಡೆಸಲು‌ ಅನ್ಯಮತೀಯರಿಗೆ ಅವಕಾಶ ನೀಡಬಾರದು ಹಿಂದೂ ವ್ಯಾಪಾರಿಗಳಿಗೆ ಮಾತ್ರ ಅವಕಾಶ ನೀಡಬೇಕೆಂದು ಹಿಂದೂ ಜಾಗರಣ ವೇದಿಕೆ ಹಾಗೂ ಬಜರಂಗದಳ ಸಂಘಟನೆಯ ಕಾರ್ಯಕರ್ತರು ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಜಿಲ್ಲಾಧಿಕಾರಿಯವರ ಹಾಗೂ ಧಾರ್ಮಿಕ ದತ್ತಿ ಇಲಾಖೆಯ ಅದೇಶದನ್ವಯ ಚಂಪಾಷಷ್ಠಿ ಮಹೋತ್ಸವ ಸಮಯದಲ್ಲಿ ಹಿಂದೂ ಬಾಂಧವರನ್ನು ಹೊರತುಪಡಿಸಿ ಅನ್ಯಧರ್ಮದವರಿಗೆ ವ್ಯಾಪಾರ ವಹಿವಾಟು ನಡೆಸಲು ಅವಕಾಶ ನೀಡಬಾರದು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

Ad Widget . Ad Widget . Ad Widget .

ಸಂಘಟನೆಯ ಕಾರ್ಯಕರ್ತರ ಮನವಿಗೆ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ವ್ಯವಸ್ಥಾಪನಾ ಸಮಿತಿಯು ಸಕಾರಾತ್ಮಕವಾಗಿ ಸ್ಪಂದಿಸಿ ನಿರ್ಣಯವನ್ನು ಕೈಗೊಂಡಿರುವುದಾಗಿ ತಿಳಿದು ಬಂದಿದೆ.

ಈ ಸಂದರ್ಭದಲ್ಲಿ ಹಿಂ.ಜಾ.ವೇ
ಜಿಲ್ಲಾ ಸಂಯೋಜಕ್ ಮೋಹನ್ ದಾಸ್ ಕಾಣಿಯೂರು, ಹರಿಪ್ರಸಾದ್ ಕೊಲ್ಲಮೊಗ್ರ, ತಾಲೂಕು ಸಹ ಸಂಚಾಲಕ ಜೀವನ್, ನಗರ ಸಂಚಾಲಕ ವಿನೋದ್,
ಬಜರಂಗದಳ ಸಂಚಾಲಕ ಯದು ಚಂದ್ರ, ಉಪಾಧ್ಯಕ್ಷ ಲಕ್ಷ್ಮೀಶ,
ಚಂದನ್.ಕೆ ಮತ್ತಿತರರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *