Ad Widget .

ಇಂಡೋನೇಷ್ಯಾ ರ್‍ಯಾಲಿಯಲ್ಲಿ  ಭಾಗಿ| ನಾಲ್ಕು ವಿಭಾಗದಲ್ಲಿ ಚಾಂಪಿಯನ್

ಸಮಗ್ರ ನ್ಯೂಸ್: ಇಂಡೋನೇಷ್ಯಾದಲ್ಲಿ ನಡೆದ ಏಷ್ಯಾ ಫೆಸಿಫಿಕ್ ರ್‍ಯಾಲಿ ಚಾಂಪಿಯನ್‌ಶಿಪ್-2023 ರಲ್ಲಿ ಭಾರತವನ್ನು ಪ್ರತಿನಿಧಿಸಿರುವ ಕರ್ನಾಟಕದ ಸುಹೇಬ್ ಕಬೀರ್ ಅವರು ಭಾಗವಹಿಸಿ ನಾಲ್ಕು ವಿಭಾಗದಲ್ಲಿ ವಿಜೇತರಾಗುವ ಮೂಲಕ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಸುಹೇಮ್ ಕಬೀರ್ ಅವರಿಗೆ ವಾಮ್ಸಿ ಮೇರ್ಲಾ ಸ್ಪೊರ್ಟ್ಸ್ ಫೌಂಡೇಶನ್ ಮತ್ತು ಜೆ.ಕೆ.ಟಯರ್ ಮುಖ್ಯ ಪ್ರಾಯೋಜಕರಾಗಿ ಸಹಕರಿಸಿದ್ದಾರೆ. ಪಿವಿಎಸ್ ಮೂರ್ತಿ ಅವರು ಸಾಹೇಬ್ ಕಬೀರ್ ಅವರ ಸಹ ಚಾಲಕರಾಗಿ ಜೊತೆಗಿದ್ದರು. ಸುಹೇಬ್ ಕಬೀರ್ ಅವರು ಏಷ್ಯಾ ಫೆಸಿಫಿಕ್ ರ್‍ಯಾಲಿ ಚಾಂಪಿಯನ್‌ಶಿಪ್‌ನಲ್ಲಿ ಎನ್‌ವಿಎ ಕ್ಲಾಸ್ ಚಾಂಪಿಯನ್ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಈ ಸ್ಪರ್ಧೆಯಲ್ಲಿ ಒಟ್ಟು ವಿವಿಧ ದೇಶದ ಒಟ್ಟು 63 ಕಾರು ರೇಸರ್‌ಗಳು ಪಾಲ್ಗೊಂಡಿದ್ದು, ಅದರಲ್ಲಿ 4ನೇ ಸ್ಥಾನ ಪಡೆದುಕೊಂಡಿರುವ ಸುಹೇಮ್ ಕಬೀರ್ ಅವರು, ಫಾರಿನ್ ಕೆಟಗರಿಯ ಎಮ್ 2 ರಲ್ಲಿ ಇಂಡೋನೇಷಿಯಾ ಕಪ್ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಪಡೆದು ವಿಶೇಷ ಸಾಧನೆ ಮಾಡಿದ್ದಾರೆ. ಸುಹೇಮ್ ಕಬೀರ್ ಅವರು ಮೂಲತಃ ವಿರಾಜಪೇಟೆಯವರು. ಮಂಗಳೂರಿನ ದೇರಳಕಟ್ಟೆಯ ಪಿಎ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ.

Ad Widget . Ad Widget . Ad Widget .

ಸುಹೇಬ್ ಕಬೀರ್ ಅವರು ನ್ಯೂಜಿಲಾಂಡ್‌ನಲ್ಲಿ ನಡೆಯಲಿರುವ ರ್‍ಯಾಲಿಯಲ್ಲಿ ಭಾಗವಹಿಸಲು ತಯಾರಿಯನ್ನು ನಡೆಸುತ್ತಿದ್ದು, ಅವರಿಗೆ ವಾಮ್ಸಿ ಮೇರ್ಲಾ ಸ್ಪೊರ್ಟ್ಸ್ ಫೌಂಡೇಶನ್ ಮತ್ತು ಜೆ.ಕೆ.ಟಯರ್ ಮುಖ್ಯ ಪ್ರಾಯೋಜಕರಾಗಿ ಸಹಕರಿಸಲಿದ್ದಾರೆ.

Leave a Comment

Your email address will not be published. Required fields are marked *