ಕಡಿಮೆ ತೂಕದ ಬಿಸ್ಕೆಟ್ ಪೊಟ್ಟಣ/ ದಂಡ ವಿಧಿಸಿದ ಗ್ರಾಹಕರ ನ್ಯಾಯಾಲಯ

ಸಮಗ್ರ ನ್ಯೂಸ್: ಬಿಸ್ಕೆಟ್ ಪೊಟ್ಟಣದ ತೂಕ ಕಡಿಮೆ ಇತ್ತು ಎಂಬ ಆರೋಪದ ಮೇರೆಗೆ ಬ್ರಿಟಾನಿಯ ಇಂಡಸ್ಟ್ರೀಸ್‌ಗೆ ಕೊಡಗಿನ ಜಿಲ್ಲಾ ಗ್ರಾಹಕರ ಆಯೋಗವು ಒಟ್ಟು ₹30 ಸಾವಿರ ದಂಡ ವಿಧಿಸಿದೆ.

Ad Widget ... ..

ಕೊಡಗಿನ ಗೋಣಿಕೊಪ್ಪದಲ್ಲಿ ಎಂ.ಇ ಹಾಲಿ ಎಂಬವರು ಮಾರಿಗೋಲ್ಡ್ ಬಿಸ್ಕೆಟ್ ಖರೀದಿಸಿದ್ದರು. ಬಿಸ್ಕೆಟ್‌ಗಳು ಕಡಿಮೆ ಇರುವುದರಿಂದ ತೂಕ ಮಾಡಿಸಿ ನೋಡಿದಾಗ 100 ಗ್ರಾಂ ಇರುವ ಬದಲು 82 ಗ್ರಾಂ ಇತ್ತು. ಹೀಗಾಗಿ ಕೊಡಗಿನ ಜಿಲ್ಲಾ ಗ್ರಾಹಕರ ಆಯೋಗದಲ್ಲಿ ಅವರು ದೂರು ಸಲ್ಲಿಸಿದ್ದರು.

Ad Widget

ಆರೋಪ ಸಾಬೀತಾದ ಕಾರಣ ಕಂಪನಿಗೆ ₹10 ಸಾವಿರ ಹಾಗೂ ದೂರುದಾರರು ಮಾನಸಿಕ ವೇದನೆ ಪಟ್ಟಿದ್ದಕ್ಕೆ ₹20 ಸಾವಿರ ನೀಡಬೇಕು ಎಂದು ಆಯೋಗವು ಕಂಪನಿಗೆ ಆದೇಶಿಸಿದೆ ಎಂದು ಪ್ರಕಟಣೆ ತಿಳಿಸಿದೆ.

Leave a Comment

Your email address will not be published. Required fields are marked *