Ad Widget .

ಬಂದ್ ಆಗಲಿದೆ ಬೆಂಗಳೂರಿನ ಐಕಾನಿಕ್ ಹೋಟೆಲ್ ‘ನ್ಯೂ ಕೃಷ್ಣ ಭವನ’| ಏಳು ದಶಕಗಳ ನೆಚ್ಚಿನ ಹೊಟೇಲ್ ಬಂದ್ ಆಗಲು‌ ಕಾರಣವೇನು?

ಸಮಗ್ರ ನ್ಯೂಸ್: ಬೆಂಗಳೂರಿನ ಅತ್ಯಂತ ಹಳೆಯ ರೆಸ್ಟೋರೆಂಟ್​ಗಳಲ್ಲಿ ಒಂದಾದ ನ್ಯೂ ಕೃಷ್ಣ ಭವನವು ಡಿಸೆಂಬರ್​ 6 ರಿಂದ ಬಂದ್​ ಆಗಲಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಮಲ್ಲೇಶ್ವರಂನ ಹೃದಯ ಭಾಗದ ಸಂಪಿಗೆ ಥಿಯೇಟರ್​ ಎದುರಿರುವ ನ್ಯೂ ಕೃಷ್ಣ ಭವನ, ಸಸ್ಯಹಾರಿ ಊಟ, ಗ್ರೀನ್​ ಮಸಾಲೆ ಇಡ್ಲಿಗಳು, ಮಂಡ್ಯ ಶೈಲಿಯ ರಾಗಿ ದೋಸೆಗಳು ಮತ್ತು ಇನ್ನಿತರ ಸಸ್ಯಹಾರಿ ಅಡುಗೆಗಳಿಗೆ ಹೆಸರುವಾಸಿಯಾಗಿದೆ. ಆದರೆ, ಇದೀಗ ಬಂದ್​ ಆಗಲಿದೆ ಎಂದು ​ರೆಸ್ಟೋರೆಂಟ್ ಮುಂಭಾಗದಲ್ಲಿ ಬ್ಯಾನ್​ರ್​ ಹಾಕಲಾಗಿದೆ. ಇದರಿಂದ ಗ್ರಾಹಕರಿಗೆ ಶಾಕ್​ ನೀಡಿದಂತಾಗಿದೆ.

Ad Widget . Ad Widget . Ad Widget .

ಹಳೆಯ ಕಾಲದ ಆಕರ್ಷಣೆಯೊಂದಿಗೆ 1954 ರಲ್ಲಿ ನ್ಯೂ ಕೃಷ್ಣ ಭವನವು ಪ್ರಾರಂಭವಾಯಿತು. ಸಾಂಪ್ರದಾಯಿಕ ಉಡುಪಿ ಭಕ್ಷ್ಯಗಳ ಜೊತೆಗೆ ನ್ಯೂ ಕೃಷ್ಣ ಭವನವು ಕಾಫಿ ಮತ್ತು ಉತ್ತರ ಭಾರತದ ಅಡುಗೆಗೆ ಹೆಚ್ಚು ಹೆಸರುವಾಸಿಯಾಗಿದೆ. ‘ಒಂದು ಕಾಲದಲ್ಲಿ ಈ ರೆಸ್ಟೋರೆಂಟ್​ ದಿನಕ್ಕೆ 2500 ಕ್ಕೂ ಹೆಚ್ಚು ಊಟವನ್ನು ನೀಡುತ್ತಿತ್ತು ಎಂದು ಹಿರಿಯರು ಹೇಳುತ್ತಾರೆ. ಇನ್ನು ಪ್ರತಿ ದಿನವೂ ಪ್ರತ್ಯೇಕವಾದ ಕಸವನ್ನು ಹಂದಿ ಸಾಕಾಣಿಕೆ ಮಾಡುವವರಿಗೆ ಕಳುಹಿಸುವ ಮೂಲಕ ಶೂನ್ಯ ತ್ಯಾಜ್ಯ ನೀತಿಯನ್ನು ಅಳವಡಿಸಿಕೊಂಡ ಹಳೆಯ ರೆಸ್ಟೋರೆಂಟ್​ಗಳಲ್ಲಿ ಇದು ಕೂಡ ಒಂದಾಗಿದೆ.

ಗ್ರಾಹಕರಿಗೇ ಹೋಟೆಲ್​ ಮುಚ್ಚುವಿಕೆಯನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಇನ್ನೂ ಇಲ್ಲಿಯೇ ಕೆಲಸ ಮಾಡಿಕೊಂಡಿರುವ ಸಿಬ್ಬಂದಿಗಳ ಮುಂದಿನ ಜೀವನ ಹೇಗೆ ಎಂಬ ಪ್ರಶ್ನೆ ಮೂಡಿದೆ. ಇಲ್ಲಿ ಸುಮಾರು 100 ಜನ ಕೆಲಸವನ್ನು ಮಾಡುತ್ತಾರೆ. ಈ ವಯಸ್ಸಿನಲ್ಲಿ ಹೊಸ ಉದ್ಯೋಗವನ್ನು ಹುಡುಕುವುದು ಅಸಾಧ್ಯವಾಗಿದೆ ಎಂದು ಕಳೆದ 25 ವರ್ಷಗಳಿಂದ ಕೆಲಸ ಮಾಡಿಕೊಂಡಿರುವ ಸಿಬ್ಬಂದಿಯೊಬ್ಬರು ಕಣ್ಣೀರು ಹಾಕುತ್ತ ನೋವನ್ನು ಹಂಚಿಕೊಂಡಿದ್ದಾರೆ.

ಇನ್ನು ಭೀಮಾ ಜ್ಯುವೆಲರ್ಸ್​ಗೆ ಆಸ್ತಿಯನ್ನು ಮಾರಾಟ ಮಾಡಲಾಗಿದೆ. ಶೀಘ್ರದಲ್ಲೇ ಅದು ಈಗಿರುವುದಕ್ಕಿಂತ ಸಂಪೂರ್ಣ ಹೊಸದಾಗಿ ಬರಲಿದೆ ಎಂದು ಮಾಲೀಕರ ಆಪ್ತ ಮೂಲಗಳು ತಿಳಿಸಿವೆ. ಈ ಕುರಿತು ಮಾತನಾಡಿದ ಹೋಟೆಲ್​ ಮಾಲೀಕರ ಸಂಘದ ಅಧ್ಯಕ್ಷ ‘ಕಳೆದೊಂದು ವರ್ಷದಿಂದ ಮಾತುಕತೆ ನಡೆದಿದ್ದು, ಮಾಲೀಕರು ಆಸ್ತಿಯನ್ನು ಮಾರಾಟ ಮಾಡಲು ನಿರ್ಧರಿಸಿದ್ದಾರೆ ಎಂದು‌ ತಿಳಿಸಿದ್ದಾರೆ

Leave a Comment

Your email address will not be published. Required fields are marked *