ಬೆಳ್ತಂಗಡಿ: ‘ನಾನು ನಿನ್ನ ಮದುವೆಯಾಗೋ ಹುಡುಗ, ಯಾವತ್ತಿದ್ರೂ ನಾನು ನಿನ್ನವನೇ’ ಅಂತ ರಂಗುರಂಗಿನ ಮಾತುಗಳಿಂದ ದಂಗುಬಡಿಸಿ, ಯುವತಿಯೋರ್ವಳನ್ನು ಗರ್ಭವತಿಯನ್ನಾಗಿಸಿ ಕೈಕೊಟ್ಟ ಘಟನೆ ಇಲ್ಲಿನ ಕಡಿರುದ್ಯಾವರದಿಂದ ವರದಿಯಾಗಿದೆ.
ಯುವಕನ ಮಾತಿನಿಂದ ಮರುಳಾದ ಯುವತಿ ಸದ್ಯ ಏಳು ತಿಂಗಳ ಗರ್ಭಿಣಿ. ಮದುವೆಯ ನೆಪವೊಡ್ಡಿ ಸರಸವಾಡಿದ ಯುವಕ ಇದೀಗ ಕೈಕೊಟ್ಟಿದ್ದು, ಹತಾಶೆಗೊಂಡ ಆಕೆ ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದು, ಆಕೆಯ ದೂರಿನ ಮೇರೆಗೆ ಲಾಯಿಲದ ಕಿರಣ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಯುವತಿಯ ಇಚ್ಛೆಗೆ ವಿರುದ್ದವಾಗಿ ಲೈಂಗಿಕ ಸಂಪರ್ಕ ಮಾಡಿರುವುದಾಗಿಯೂ ದೂರಲ್ಲಿ ದಾಖಲಿಸಿದ್ದು, ಈತನ ವಿರುದ್ದ ಈ ಹಿಂದೆಯೂ ಅಪ್ರಾಪ್ತೆಯೋರ್ವಳನ್ನು ಬಲತ್ಕಾರ ಮಾಡಿದ ಕೇಸು ದಾಖಲಾಗಿದೆ. ನಂಬಿ ಮೋಸ ಹೋಗುವ ಹುಡುಗೀರು ಇರುವಾಗ ಮೋಸ ಮಾಡೋರು ಇದ್ದೆ ಇರ್ತಾರೆ ಎನ್ನೋದು ಮತ್ತೆ ಸಾಬೀತಾಗಿದೆ