ಇಸ್ರೇಲ್ ವಶಕ್ಕೆ ಗಾಜಾ/ ಹಮಾಸ್ ಆಳ್ವಿಕೆ ಅಂತ್ಯ

ಸಮಗ್ರ ನ್ಯೂಸ್: ಇಸ್ರೇಲ್-ಹಮಾಸ್ ನಡುವಿನ ಯುದ್ಧ ಮುಂದುವರೆದಿದ್ದು, ಇದೀಗ ಗಾಜಾ ಪಟ್ಟಿಯನ್ನು ಇಸ್ರೇಲ್ ವಸಪಡಿಸಿಕೊಂಡಿದೆ. ಈ ಕುರಿತು ಮಾಹಿತಿ ನೀಡಿರುವ ಇಸ್ರೇಲ್‍ನ ರಕ್ಷಣಾ ಸಚಿವ ಯೋವ್ ಗ್ಯಾಲಂಟ್, 16 ವರ್ಷಗಳಿಂದ ಹಮಾಸ್ ಗಾಜಾಪಟ್ಟಿಯ ಮೇಲೆ ಆಳ್ವಿಕೆ ನಡೆಸಿದ್ದು, ಈ ಆಳ್ವಿಕೆ ಇಂದು ಅಂತ್ಯವಾಗಿದ್ದು, ಗಾಜಾ ಸಂಪೂರ್ಣವಾಗಿ ಇಸ್ರೇಲ್‍ನ ವಶಕ್ಕೆ ಸಿಕ್ಕಿದೆ ಎಂದು ತಿಳಿಸಿದ್ದಾರೆ.

Ad Widget ... ..

ಗಾಜಾ ಮೇಲಿನ ಅಧಿಕಾರವನ್ನು ಹಮಾಸ್ ಕಳೆದುಕೊಂಡಿದ್ದು, ಉಗ್ರರೆಲ್ಲ ದಕ್ಷಿಣದ ಕಡೆಗೆ ಪರಾರಿಯಾಗುತ್ತಿದ್ದಾರೆ. ಹಮಾಸ್ ಪ್ರಾರಂಭಿಸಿದ ಯುದ್ಧಕ್ಕೆ ನಾವು ಅಂತ್ಯ ಹಾಡುತ್ತೇವೆ. ಹಮಾಸ್ ಹಲವಾರು ಜನರ ಸಾವು-ನೋವಿಗೆ ಕಾರಣವಾಗಿದ್ದು, ಆ ಎಲ್ಲ ಸಾವಿಗೆ ತಕ್ಕ ಉತ್ತರ ಕೊಡುತ್ತೇವೆ ಎಂದು ಹೇಳಿದ್ದಾರೆ.

Ad Widget

ಹಮಾಸ್ ಅತಿ ದೊಡ್ಡ ಅಡಗುತಾಣ ಆಸ್ಪತ್ರೆಯ ನೆಲಮಾಳಿಗೆಯ ಮೇಲೆ ದಾಳಿ ಮಾಡಿ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದು, 400ಕ್ಕೂ ಹೆಚ್ಚು ಉಗ್ರರನ್ನು ಹತ್ಯೆ ಮಾಡಲಾಗಿದೆ. ಹಮಾಸ್ ಅನ್ನು ಸಂಪೂರ್ಣ ನಾಶ ಮಾಡುವವರಗೆ ಯುದ್ಧ ಮುಂದುವರಿಯಲಿದೆ ಎಂದು ಅವರು ತಿಳಿಸಿದ್ದಾರೆ.

Leave a Comment

Your email address will not be published. Required fields are marked *