ಬಿಲ್ಲು ಮುರಿದ ವರ, ಹೂಮಾಲೆ ಹಾಕಿದ ವಧು, ಬಿಹಾರದಲ್ಲಿ ನಡೆಯಿತು ಕಲಿಯುಗ ‘ಸೀತಾ ಸ್ವಯಂವರ’

ಬಿಹಾರ: ರಾಮಾಯಣದಲ್ಲಿ ಸೀತಾ ಸ್ವಯಂವರ ಹೇಗೆ ನಡೆಯಿತು ಎಂದು ಎಲ್ಲರಿಗೂ ಗೊತ್ತಿದೆ. ಬೃಹತ್​ ಬಿಲ್ಲನ್ನು ಎದೆಯೇರಿಸಲು ಹೆಣಗಾಡುತ್ತಿದ್ದಾಗ ಶ್ರೀರಾಮ ಬಂದು ಬಿಲ್ಲು ಎತ್ತಿ ಜಯಶಾಲಿಯಾಗುತ್ತಾನೆ. ಸ್ವಯಂವರ ಗೆದ್ದ ರಾಮನಿಗೆ ಸೀತಾಮಾತೆ ವರಮಾಲೆ ಹಾಕುವ ಮೂಲಕ ಮದುವೆ ನೆರವೇರುತ್ತೆ. ಇದೇ ರೀತಿ ಸ್ವಯಂವರ ಈಗಲೇ ನಡೆದಿದೆ ಎಂದರೆ ನೀವು ನಂಬಲೇ ಬೇಕು. ಬಿಹಾರದ ಸರಾನ ಜಿಲ್ಲೆಯಲ್ಲಿ ಆಧುನಿಕ ಸ್ವಯಂವರ ನಡೆದಿದೆ. ರಿಸೆಪ್ಷನ್​​ ವೇದಿಕೆ ಮೇಲೆ ವರ ಬಿಲ್ಲನ್ನು ಮುರಿದ ಬಳಿಕವೇ ವಧು ವರ ಮಾಲೆ ಹಾಕಿರುವ ಸ್ವಾರಸ್ಯಕರ ಘಟನೆ ನಡೆದಿದೆ.

Ad Widget ... ..

ಸಾಮಾಜಿಕ ಜಾಲತಾಣಗಳಲ್ಲಿ ಸ್ವಯಂವರದ ವಿಡಿಯೋ ವೈರಲ್​ ಆಗಿದೆ. ರಾಮನ ಭಕ್ತರೋ, ನಿತ್ಯ ಟಿವಿಗಳಲ್ಲಿ ಪ್ರಸಾರವಾಗುವ ರಾಮಾಯಣದಿಂದ ಪ್ರೇರಣೆ ಪಡೆದರೋ ಗೊತ್ತಿಲ್ಲ. ತಮ್ಮ ಮದುವೆಯನ್ನು ಮಿನಿ ಸ್ವಯಂವರದಂತೆ ಮಾಡಿರುವುದು ಸಖತ್​ ಸುದ್ದಿಯಾಗಿದೆ.
ಭಾರೀ ಬಿಲ್ಡಪ್​​ನೊಂದಿಗೆ ವೇದಿಕೆ ಮೇಲೆ ಬರುವ ವರ ಮೊದಲು ಆಟಿಕೆಯ ಬಿಲ್ಲುವನ್ನು ಎತ್ತಿ ಎಲ್ಲರಿಗೂ ತೋರಿಸಿದ್ದಾನೆ. ನಂತರ ವಧು ವೇದಿಕೆ ಮೇಲೆ ಬಂದು ವರನಿಗೆ ಮಾಲೆ ಹಾಕಿದ್ದಾಳೆ. ಸ್ವಯಂವರ ಮಾಡಿಕೊಂಡ ವರನ ಹೆಸರು ಶಿವ ಎಂದು ತಿಳಿದು ಬಂದಿದೆ. ವರ ಶಿವ ಬಿಲ್ಲು ಮುರಿಯುತ್ತಿದಂತೆ ಆರತಕ್ಷತೆಯಲ್ಲಿ ಭಾಗಿಯಾಗಿದ್ದ ಅತಿಥಿಗಳು ಹೂವನ್ನು ಎಸೆದು ಶುಭ ಕೋರಿದ್ದಾರೆ. ಇನ್ನು ಕೆಲವರು ಮಾಡರ್ನ್ ಸ್ವಯಂವರ ಕಂಡು ಸ್ಥಳದಲ್ಲೇ ಬಿದ್ದು ಬಿದ್ದು ನಕ್ಕಿದ್ದಾರೆ. ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ವಧು ಥೇಟ್​ ಸೀತಾಮಾತೆಯಂತೆ ವೇದಿಕೆ ಮೇಲೆ ಬಂದು ವರಮಾಲೆ ಹಾಕಿ ಸಂಭ್ರಮಿಸಿದ್ದಾಳೆ. ಈ ಮದುವೆಯ ಫೋಟೋಗಳು ಜಾಲತಾಣಗಳಲ್ಲಿ ವೈರಲ್ ಆಗಿವೆ.

Ad Widget

Leave a Comment

Your email address will not be published. Required fields are marked *