ಚಿಕ್ಕಮಗಳೂರು: ಬಸ್ ನಿಲ್ದಾಣದಲ್ಲಿ ಕಳ್ಳತನ ಕೈ ಚಳಕ | ಸರಕಾರಿ ಬಸ್ಸಿಗೆ ಹತ್ತುವಾಗ್ಲೇ ಮಾಂಗಲ್ಯ ಕಿತ್ತ ಖದೀಮರು

ಸಮಗ್ರ ನ್ಯೂಸ್: ಕೆ ಎಸ್ ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಮೂಡಿಗೆರೆಯಿಂದಾ ಕೊಟ್ಟಿಗೆಹಾರಕ್ಕೆ ಬರುತ್ತಿದ್ದ ಮಹಿಳೆ ಯಶೋಧಮ್ಮ ಎಂಬುವರು ಬಸ್ಸಿಗೆ ಹತ್ತುವಾಗ ಕುತ್ತಿಗೆಯಲ್ಲಿ ಹಾಕಿದ್ದ 37 ಗ್ರಾಮ್ ಮಾಂಗಲ್ಯ ಸರ ಕಿತ್ತು ಪರಾರಿಯಾದ ಘಟನೆ ಆ.31 ರಂದು ಮೂಡಿಗೆರೆ ಬಸ್ ನಿಲ್ದಾಣದಲ್ಲಿ ನಡೆದಿದೆ.

Ad Widget ... ..

ಸರ ಕಳೆದುಕೊಂಡ ಮಹಿಳೆ ಕೊಟ್ಟಿಗೆಹಾರದ ತರುವೆ ಮೂಲದವರಾಗಿದ್ದು, 1 ಲಕ್ಷ ಕ್ಕಿಂತಾ ಹೆಚ್ಚು ಬೆಲೆ ಬಾಳುವ ಮಾಂಗಲ್ಯ ಸರಎಂದು ತಿಳಿದಿದೆ. ಇನ್ನು ಮೂಡಿಗೆರೆ ಬಸ್ ನಿಲ್ದಾಣದಲ್ಲಿ ಸಿ.ಸಿ.ಕ್ಯಾಮರಾ ಇಲ್ಲದೇ ಇರುವುದಕ್ಕೆ ಈ ಕಳ್ಳತನ ಮಾಡುವುದಕ್ಕೆ ಅನುಕೂಲಕರವಾಗಿದೆ ಎಂದು ಹೇಳಲಾಗಿದೆ.

Ad Widget

ಈ ಘಟನೆ ವಿರುದ್ಧ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *