ಸಮಗ್ರ ನ್ಯೂಸ್:ವಿರಾಜಪೇಟೆ ಗಾಂಜಾ ಮಾರಾಟ ಮತ್ತು ಸರಬರಾಜು ಮಾಡುತ್ತಿದ್ದವರ ಬಂಧನ.
ಈ ಬಗ್ಗೆ ನಗರ ಪೊಲೀಸರಿಗೆ ದೊರಕಿದ ಖಚಿತ ವರ್ತಮಾನದ ಮೇಲೆ ಗಾಂಜಾ ಮಾರಾಟ ಮತ್ತು ಸರಬರಾಜು ಮಾಡುತ್ತಿದ್ದ ವಿರಾಜ್ ಪೇಟೆಯ ನಿವಾಸಿ ಮೊಹಮ್ಮದ್ ಆಲಿ ಕಲ್ಲುಬಾಣೆ, ಸಂದೀಪ ಜಂಗ್ಲಿ ಅರಸು ನಗರ, ಅಶೋಕ್ ಬಿಳಗುಂದ ಹಾಗೂ ಮಹೇಶ್ ಸುಂಕದಕಟ್ಟೆಯ ನಿವಾಸಿಗಳನ್ನು ಬಂಧಿಸಿ ಇವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆರೋಪಿಗಳ ಬಳಿಯಿಂದ 1.12ಕೆಜಿ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ. ವಿರಾಜಪೇಟೆ ಸುತ್ತಮುತ್ತ ಗಾಂಜಾ ಮಾರಾಟ ಮತ್ತು ಬಳಕೆ ಹೆಚ್ಚುತ್ತಿದ್ದು, ಇದೀಗ ಪೊಲೀಸರು ಕಾರ್ಯಾಚರಣೆ ನಡೆಸಿ ಈ ಅಕ್ರಮ ಗಾಂಜಾ ಮಾರಾಟವನ್ನು ತಡೆಗಟ್ಟಲು ಕ್ರಮ ಕೈಗೊಂಡಿದ್ದಾರೆ.