Ad Widget .

ಜೈಲಿನಿಂದ ಬಿಡುಗಡೆಗೊಂಡ ಕೈದಿಗೆ ಮುಸ್ಲಿಂ ಧರ್ಮದ ಮೇಲೆ ಪ್ರೀತಿ..! | ನಾನು ದೇವಸ್ಥಾನ, ಮಸೀದಿಗೆ ಹೋಗುತ್ತಿದ್ದೆ | ಇದರಲ್ಲಿ ತಪ್ಪೇನಿದೆ..?

ಮೂರು ವರ್ಷಗಳ ಕಾಲ ಮೀರತ್​ ಜೈಲಿನಲ್ಲಿದ್ದ 46 ವರ್ಷದ ತಾರಾ ಚಂದ್​ ಈ ಅವಧಿಯಲ್ಲಿ ಕೆಲ ಕೈದಿಗಳನ್ನ ತನ್ನ ಸ್ನೇಹಿತರನ್ನಾಗಿ ಮಾಡಿಕೊಂಡಿದ್ದರು. ಇದರಲ್ಲಿ ಕೆಲವರು ಮುಸ್ಲಿಮರೂ ಇದ್ದರು. ಕೆಲ ದಿನಗಳ ಹಿಂದಷ್ಟೇ ಜೈಲಿನಿಂದ ಹೊರಬಂದ ತಾರಾಚಂದ್​ ತಮ್ಮ ಮುಸ್ಲಿಂ ಸ್ನೇಹಿತರ ನೆರವಿನಿಂದ ತಾಹೀರ್​ ಎಂದು ಹೆಸರನ್ನ ಬದಲಾಯಿಸಿಕೊಂಡಿದ್ದರು. ಅಲ್ಲದೇ ಗಡ್ಡವನ್ನ ಬೆಳೆಸಲು ಆರಂಭಿಸಿದ್ರು.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಆದರೆ ಇದೆಲ್ಲವನ್ನ ವಿರೋಧಿಸಿ ಬಲಪಂಥೀಯರು ಪ್ರತಿಭಟನೆ ಮಾಡುತ್ತಿದ್ದಂತೆಯೇ ತಾರಾಚಂದ್​ ತಮ್ಮ ಗಡ್ಡವನ್ನ ಶೇವ್​ ಮಾಡಿದ್ದಾರೆ.

Ad Widget . Ad Widget . Ad Widget .

ನಾನು ದೇವಸ್ಥಾನ ಹಾಗೂ ಮಸೀದಿಗೆ ಹೋಗುತ್ತಿದ್ದೆ. ಇದರಲ್ಲಿ ತಪ್ಪೇನಿದೆ..? ದೇವರು ಎಲ್ಲರಿಗೂ ಒಂದೇ. ದೇವರನ್ನ ಆರಾಧಿಸಲು ಯಾವ ಧರ್ಮ ಪಾಲಿಸುತ್ತೇವೆ ಅನ್ನೋದು ಮುಖ್ಯವಲ್ಲ ಎಂದು ತಾರಾ ಚಂದ್​ ಹೇಳಿದ್ದಾರೆ. ಆದರೆ ಮೀರತ್​ನ ಕಿತ್​ಹೋರ್​ ಎಂಬಲ್ಲಿ ಹಿಂದೂ ಧರ್ಮಿಯರು ಮಾಡಿದ ಪ್ರತಿಭಟನೆಯಿಂದ ತಾರಾ ಚಂದ್​ ಹೆದರಿದ್ದಾರೆ.

ಕಳೆದ ತಿಂಗಳು 19ನೇ ತಾರೀಖಿನಂದು ಚಾಂದ್​ ಜೈಲಿನಿಂದ ಬಿಡುಗಡೆಯಾಗಿದ್ದರು. ಮೊದ ಮೊದಲು ಎಲ್ಲವೂ ಸಾಮಾನ್ಯವಾಗಿಯೇ ಇತ್ತು. ಆದರೆ ಕ್ರಮೇಣವಾಗಿ ಚಾಂದ್​ ಮುಸ್ಲಿಂ ಪ್ರೀತಿಗೆ ವಿರೋಧ ವ್ಯಕ್ತವಾದ ಹಿನ್ನೆಲೆ ಚಾಂದ್​ ಗಡ್ಡ ಬೋಳಿಸಲೇಬೇಕಾಗಿ ಬಂದಿದೆ.

ನಾನು 42 ತಿಂಗಳುಗಳ ಕಾಲ ಜೈಲಿನಲ್ಲಿದ್ದೆ. ಈ ಕಠಿಣ ಸಂದರ್ಭದಲ್ಲಿ ನನ್ನ ಸ್ನೇಹಿತರ್ಯಾರೂ ನನ್ನ ಸಹಾಯಕ್ಕೆ ಧಾವಿಸಿರಲಿಲ್ಲ. ಆದರೆ ಉಸ್ಮಾನ್​ ಹಾಗೂ ಆತನ ಸ್ನೇಹಿತರು ನನಗೆ ನೆರವಾಗಿದ್ದರು. ನನ್ನ ಕೇಸ್​ ಗೆಲ್ಲುವ ಸಲುವಾಗಿ ಹಣ ಹೊಂದಿಸಲು ದೇಣಿಗೆ ಸಂಗ್ರಹಿಸಿದ್ರು. ಅವರು ನಮಾಜ್​ ಮಾಡೋದನ್ನೆಲ್ಲ ನಾನು ಗಮನಿಸುತ್ತಿದೆ. ಹೀಗಾಗಿ ನಾನೂ ಸಹ ಅವರಂತೆ ಗಡ್ಡ ಬಿಡಲು ಆರಂಭಿಸಿದೆ. ಆದರೆ ನಾನೆಂದೂ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿರಲಿಲ್ಲ ಎಂದು ಚಾಂದ್​ ಸ್ಪಷ್ಟನೆ ನೀಡಿದ್ದಾರೆ.

Leave a Comment

Your email address will not be published. Required fields are marked *