ಇಬ್ಬರು ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ತಾಯಿ

ಬಳ್ಳಾರಿ: ಗಂಡನೊಂದಿಗೆ ಜಗಳವಾಡಿ ಕೊನೆಗೆ ಕುಪಿತಗೊಂಡ ಹೆಂಡತಿ ತನ್ನ ಇಬ್ಬರು ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾಗಿದ್ದಾಳೆ.

Ad Widget ... ..

Ad Widget

ಬಳ್ಳಾರಿಯ ಇಂದಿರಾ ನಗರದ ಸಿದ್ಧಪ್ಪ ಎಂಬವರ ಪತ್ನಿ ಸುನೀತಾ(25) ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡವರು. ಮಕ್ಕಳಾದ ಯಶ್ವಂತ(4) ಹಾಗೂ ಸಾನ್ವಿ(3) ಮೃತ ದುರ್ದೈವಿಗಳು.

ಕ್ಷುಲ್ಲಕ ಕಾರಣಕ್ಕೆ ಗಂಡ ಹೆಂಡತಿ ನಡುವೆ ಜಗಳ ನಡೆಯುತ್ತಿತ್ತು. ಕೊನೆಗೆ ಸುನಿತಾ ಇಬ್ಬರು ಮಕ್ಕಳನ್ನು ಮನೆಯ ಪಕ್ಕದ ನೀರಿನ ಟ್ಯಾಂಕ್ ನಲ್ಲಿ ಮುಳುಗಿಸಿ ಕೊಂಡಿದ್ದಾಳೆ. ಬಳಿಕ ತನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.

ನಗರದ ಕೌಲ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Comment

Your email address will not be published. Required fields are marked *