ಲಂಡನ್: ಗಂಡ ನೀಲಿ ಚಿತ್ರ ವೀಕ್ಷಣೆ ಮಾಡುವುದು ಅನೇಕ ಹೆಂಡತಿಯರಿಗೆ ಇಷ್ಟವಾಗುವುದಿಲ್ಲ. ಈ ವಿಚಾರದಲ್ಲಿ ದಂಪತಿ ನಡುವೆ ತಿಕ್ಕಾಟ ನಡೆದೇ ಇರುತ್ತದೆ.
ಲಂಡನ್ನ ವೃದ್ಧ ಡಾಕ್ಟರ್ ಹಾಗೂ ಆತನ ಪತ್ನಿ ನಡುವೆ ಇದೇ ವಿಚಾರಕ್ಕೆ ಜಗಳ ಏರ್ಪಟ್ಟಿತ್ತು. ನಂತರ ಪೋರ್ನ್ ವಿಡಿಯೋ ನೋಡಲು ಈತ ಅನುಸರಿಸಿದ ಮಾರ್ಗ ಮಾತ್ರ ವಿಚಿತ್ರವಾದುದ್ದು! ಪೀಟರ್ ಡೇವಿಸ್ ವೈದ್ಯನ ಹೆಸರು. ಈತನ ವಯಸ್ಸು 70 ವರ್ಷ. ಕ್ಷಯ ರೋಗದ ಸ್ಪೆಷಲಿಸ್ಟ್ ಆಗಿದ್ದ ಈತ 18ನೇ ವರ್ಷಕ್ಕೆ ಪೋರ್ನ್ಗೆ ಅಡಿಕ್ಟ್ ಆಗಿದ್ದ. 10 ವರ್ಷಗಳ ಹಿಂದೆ ಕೆಲಸದಿಂದ ನಿವೃತ್ತಿ ಪಡೆದು ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದ. 60ರ ವಯಸ್ಸಲ್ಲೂ ಪೀಟರ್ಗೆ ಪೋರ್ನ್ ವಿಡಿಯೋ ನೋಡುವ ಹುಚ್ಚು ಅತಿಯಾಗಿತ್ತು.
ಮನೆಯ ಕಂಪ್ಯೂಟರ್ನಲ್ಲಿ ಕುಳಿತು ನೀಲಿ ಚಿತ್ರ ವೀಕ್ಷಣೆ ಮಾಡುತ್ತಿದ್ದ. ಒಂದು ದಿನ ಇದು ಪತ್ನಿಗೆ ಗೊತ್ತಾಗಿತ್ತು. ಈ ವೇಳೆ ಪೀಟರ್ಗೆ ಪತ್ನಿ ಕ್ಲಾಸ್ ತೆಗೆದುಕೊಂಡಿದ್ದಳು. ಅಷ್ಟೇ ಅಲ್ಲ, ಕಂಪ್ಯೂಟರ್ನಲ್ಲಿ ಪೋರ್ನ್ ವಿಡಿಯೋ ನೋಡದಂತೆ ನಿರ್ಬಂಧ ಹೇರಿದ್ದಳು. ಈ ವಿಚಾರ ಪೀಟರ್ಗೆ ಶಾಕ್ ನೀಡಿತ್ತು. ಮುಂದೆ ಪೋರ್ನ್ ವಿಡಿಯೋ ನೋಡುವುದು ಹೇಗೆ ಎಂದು ಆತ ಚಿಂತಾಕ್ರಾಂತನಾಗಿದ್ದ.
ನಂತರ ಇದಕ್ಕಾಗಿ ಹೊಸ ಪ್ಲಾನ್ ಒಂದನ್ನು ಮಾಡಿದ್ದ. ನಿತ್ಯ ಕಚೇರಿಗೆ ತೆರಳುತ್ತಿದ್ದ ಪೀಟರ್ ಅಲ್ಲಿ ಆತ ಕೆಲಸ ಮಾಡುವ ಕಂಪ್ಯೂಟರ್ನಲ್ಲಿ ಫೋಲ್ಡರ್ ಒಂದನ್ನು ಕ್ರಿಯೆಟ್ ಮಾಡಿಕೊಂಡಿದ್ದ. ಅದರಲ್ಲಿ ಒಂದಷ್ಟು ಪೋರ್ನ್ ವಿಡಿಯೋಗಳನ್ನು ಡೌನ್ಲೋಡ್ ಮಾಡಿ ಶೇಖರಿಸಿಟ್ಟಿದ್ದ. ನಿತ್ಯ ಕಚೇರಿಗೆ ಬಂದು ಕೆಲಸದ ಮಧ್ಯೆಯೇ ಪೋರ್ನ್ ವಿಡಿಯೋ ನೋಡುತ್ತಿದ್ದ! ಇದು ಸುಮಾರು 10 ವರ್ಷಗಳ ಕಾಲ ನಡೆದೇ ಇತ್ತು.
ಆದಾಗ್ಯೂ ಯಾರೊಬ್ಬರಿಗೂ ಈ ಬಗ್ಗೆ ಅನುಮಾನ ಬಂದಿರಲಿಲ್ಲ. ಈಗ ಈ ವಿಚಾರ ಸಂಸ್ಥೆಯ ಮುಖ್ಯಸ್ಥನಿಗೆ ಗೊತ್ತಾಗಿದೆ. ಅಷ್ಟೇ ಅಲ್ಲ, ಈ ಬಗ್ಗೆ ಸಂಸ್ಥೆ ತನಿಖೆಗೆ ಆದೇಶಿಸಿತ್ತು. ಈ ವೇಳೆ ಕಳೆದ 10 ವರ್ಷಗಳಿಂದ ಕಚೇರಿ ಕಂಪ್ಯೂಟರ್ನಲ್ಲಿ ನಿತ್ಯ ಪೋರ್ನ್ ವಿಡಿಯೋ ನೋಡುತ್ತಿರುವದನ್ನು ಒಪ್ಪಿಕೊಂಡಿದ್ದಾನೆ.
ಈತನ ವಿರುದ್ಧ ಕ್ರಮ ಕೈಗೊಳ್ಳಲು ಸಂಸ್ಥೆ ಮುಂದಾಗಿದೆ.
ಪೀಟರ್ ಡೇವಿಸ್ ವೈದ್ಯನ ಹೆಸರು. ಈತನ ವಯಸ್ಸು 70 ವರ್ಷ. ಕ್ಷಯ ರೋಗದ ಸ್ಪೆಷಲಿಸ್ಟ್ ಆಗಿದ್ದ ಈತ 18ನೇ ವರ್ಷಕ್ಕೆ ಪೋರ್ನ್ಗೆ ಅಡಿಕ್ಟ್ ಆಗಿದ್ದ. 10 ವರ್ಷಗಳ ಹಿಂದೆ ಕೆಲಸದಿಂದ ನಿವೃತ್ತಿ ಪಡೆದು ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದ. 60ರ ವಯಸ್ಸಲ್ಲೂ ಪೀಟರ್ಗೆ ಪೋರ್ನ್ ವಿಡಿಯೋ ನೋಡುವ ಹುಚ್ಚು ಅತಿಯಾಗಿತ್ತು. ಮನೆಯ ಕಂಪ್ಯೂಟರ್ನಲ್ಲಿ ಕುಳಿತು ನೀಲಿ ಚಿತ್ರ ವೀಕ್ಷಣೆ ಮಾಡುತ್ತಿದ್ದ.
ಒಂದು ದಿನ ಇದು ಪತ್ನಿಗೆ ಗೊತ್ತಾಗಿತ್ತು. ಈ ವೇಳೆ ಪೀಟರ್ಗೆ ಪತ್ನಿ ಕ್ಲಾಸ್ ತೆಗೆದುಕೊಂಡಿದ್ದಳು. ಅಷ್ಟೇ ಅಲ್ಲ, ಕಂಪ್ಯೂಟರ್ನಲ್ಲಿ ಪೋರ್ನ್ ವಿಡಿಯೋ ನೋಡದಂತೆ ನಿರ್ಬಂಧ ಹೇರಿದ್ದಳು. ಈ ವಿಚಾರ ಪೀಟರ್ಗೆ ಶಾಕ್ ನೀಡಿತ್ತು. ಮುಂದೆ ಪೋರ್ನ್ ವಿಡಿಯೋ ನೋಡುವುದು ಹೇಗೆ ಎಂದು ಆತ ಚಿಂತಾಕ್ರಾಂತನಾಗಿದ್ದ. ನಂತರ ಇದಕ್ಕಾಗಿ ಹೊಸ ಪ್ಲಾನ್ ಒಂದನ್ನು ಮಾಡಿದ್ದ.
ನಿತ್ಯ ಕಚೇರಿಗೆ ತೆರಳುತ್ತಿದ್ದ ಪೀಟರ್ ಅಲ್ಲಿ ಆತ ಕೆಲಸ ಮಾಡುವ ಕಂಪ್ಯೂಟರ್ನಲ್ಲಿ ಫೋಲ್ಡರ್ ಒಂದನ್ನು ಕ್ರಿಯೆಟ್ ಮಾಡಿಕೊಂಡಿದ್ದ. ಅದರಲ್ಲಿ ಒಂದಷ್ಟು ಪೋರ್ನ್ ವಿಡಿಯೋಗಳನ್ನು ಡೌನ್ಲೋಡ್ ಮಾಡಿ ಶೇಖರಿಸಿಟ್ಟಿದ್ದ. ನಿತ್ಯ ಕಚೇರಿಗೆ ಬಂದು ಕೆಲಸದ ಮಧ್ಯೆಯೇ ಪೋರ್ನ್ ವಿಡಿಯೋ ನೋಡುತ್ತಿದ್ದ! ಇದು ಸುಮಾರು 10 ವರ್ಷಗಳ ಕಾಲ ನಡೆದೇ ಇತ್ತು. ಆದಾಗ್ಯೂ ಯಾರೊಬ್ಬರಿಗೂ ಈ ಬಗ್ಗೆ ಅನುಮಾನ ಬಂದಿರಲಿಲ್ಲ.
ಈಗ ಈ ವಿಚಾರ ಸಂಸ್ಥೆಯ ಮುಖ್ಯಸ್ಥನಿಗೆ ಗೊತ್ತಾಗಿದೆ. ಅಷ್ಟೇ ಅಲ್ಲ, ಈ ಬಗ್ಗೆ ಸಂಸ್ಥೆ ತನಿಖೆಗೆ ಆದೇಶಿಸಿತ್ತು. ಈ ವೇಳೆ ಕಳೆದ 10 ವರ್ಷಗಳಿಂದ ಕಚೇರಿ ಕಂಪ್ಯೂಟರ್ನಲ್ಲಿ ನಿತ್ಯ ಪೋರ್ನ್ ವಿಡಿಯೋ ನೋಡುತ್ತಿರುವದನ್ನು ಒಪ್ಪಿಕೊಂಡಿದ್ದಾನೆ. ಈತನ ವಿರುದ್ಧ ಕ್ರಮ ಕೈಗೊಳ್ಳಲು ಸಂಸ್ಥೆ ಮುಂದಾಗಿದೆ.