ಸುಬ್ರಹ್ಮಣ್ಯ: ಕಾರಿನ ಗಾಜು ಹೊಡೆದು ಚಿನ್ನ, ದಾಖಲೆಗಳ ಬ್ಯಾಗ್ ಕಳವು

ಸುಬ್ರಹ್ಮಣ್ಯ: ಕ್ಷೇತ್ರ ಸಂದರ್ಶನಕ್ಕೆ ಬಂದಿದ್ದ ಕೇರಳದ ವ್ಯಕ್ತಿ ಯೊಬ್ಬರ ಕಾರಿನ ಗಾಜು ಹೊಡೆದು ಚಿನ್ನ, ದಾಖಲೆ ಇದ್ದ ಬ್ಯಾಗ್ ಕಳವು ಗೈದಿರುವ ಘಟನೆ ರವಿವಾರ ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ನಡೆದಿದೆ.
ಕೇರಳದ ಕನ್ನೂರು ಜಿಲ್ಲೆಯ ಪಾಡೋಯೋಟು ಚಲ್ಲ್‌ ನಿವಾಸಿ ಸುಯಿಶ್‌ ಟಿ.ಸಿ. (34) ಈ ಬಗ್ಗೆ ಸುಬ್ರಹ್ಮಣ್ಯ ಠಾಣೆಗೆ ದೂರು ನೀಡಿದ್ದಾರೆ. ಅವರು ರವಿವಾರ ಸಂಜೆ ಕಾರಿನಲ್ಲಿ, ತನ್ನ ಚಿಕ್ಕಮ್ಮನೊಂದಿಗೆ ಕುಕ್ಕೆ ಸುಬ್ರಹ್ಮಣ್ಯ ಬಂದಿದ್ದು, ರಥ ಬೀದಿಯ ಪಕ್ಕದಲ್ಲಿರುವ ಪಾರ್ಕಿಂಗ್ ಸ್ಥಳದಲ್ಲಿ ಕಾರನ್ನು ನಿಲ್ಲಿಸಿ ದೇವಸ್ಥಾನಕ್ಕೆ ಹೋಗಿದ್ದಾರೆ. ಬಳಿಕ ಪೂಜಾ ಕಾರ್ಯಕ್ರಮ ಮುಗಿಸಿಕೊಂಡು ಸ್ವಲ್ಪ ಸಮಯದ ಬಳಿಕ ಕಾರಿನ ಬಳಿ ಬಂದು ನೋಡಿದ ವೇಳೆ ಕಾರಿನ ಹಿಂಬದಿಯ ಗಾಜನ್ನು ಪುಡಿ ಮಾಡಿ ಕಾರಿನಲ್ಲಿದ್ದ ಎರಡು ಬ್ಯಾಗ್ ಗಳನ್ನು ಕಳ್ಳರು ಕಳವುಗೈದಿರುವುದು ಕಂಡುಬಂದಿದೆ. ಕಳುವಾಗಿರುವ ಬ್ಯಾಗ್ ನಲ್ಲಿ ಅಂದಾಜು 14 ಗ್ರಾಂ ತೂಕದ ಚಿನ್ನದ ಬ್ರಾಸ್ ಲೈಟ್ ಹಾಗೂ ಆಧಾರ ಕಾರ್ಡ್, ಎಟಿಎಂ, ಇತ್ಯಾದಿ ದಾಖಲೆಗಳಿದ್ದವು. ಕಳುವಾದ ಸೊತ್ತಿನ ಅಂದಾಜು ಮೌಲ್ಯ 42,000 ಆಗಬಹುದಾಗಿದೆ. ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

. Ad Widget . Ad Widget

Leave a Comment

Your email address will not be published. Required fields are marked *