ಬೆಳ್ಳಾರೆ: ವಿಷಕಾರಿ ಹಣ್ಣಿನ ಜ್ಯೂಸ್ ಸೇವಿಸಿದ್ದ ಮಹಿಳೆ ಚಿಕಿತ್ಸೆ ಫಲಿಸದೇ ಸಾವು

ಸಮಗ್ರ ನ್ಯೂಸ್: ಕಾಡಿನಲ್ಲಿ ಸಿಗುವ ಯಾವುದೋ ಹಣ್ಣನ್ನು ಮೈರೋಲ್ ಎಂದು ಭಾವಿಸಿ ತಂದು ಜ್ಯೂಸ್ ಮಾಡಿ ಕುಡಿದ ಮಹಿಳೆಯೊಬ್ಬರು ಸಾವನಪ್ಪಿದ ಘಟನೆ ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಶೇಣಿ‌ ಎಂಬಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಶೇಣಿ ಸಮೀಪದ ಕುಳ್ಳಾಜೆ ನಿವಾಸಿ ಲೀಲಾವತಿ(35) ಎಂದು ಗುರುತಿಸಲಾಗಿದೆ.

Ad Widget ... ..

ಒಂದು ವಾರದ ಹಿಂದೆ ಕಾಡಿನಲ್ಲಿ ಸಿಗುವ ಮೈರೋಳ್ ಹಣ್ಣನ್ನು , ತಿನ್ನಬಹುದಾದ ಹಣ್ಣು ಎಂದು ಭಾವಿಸಿ ಮನೆಗೆ ತಂದು, ಅದರ ರಸ ತೆಗೆದು ಶರ್ಬತ್ ಮಾಡಿ ಲೀಲಾವತಿ ಹಾಗೂ ಅವರ ತಂದೆ ಸೇವನೆ ಮಾಡಿದ್ದರು.

Ad Widget

ಇದರ ಪರಿಣಾಮವಾಗಿ ತಂದೆ ಮಗಳಿಬ್ಬರೂ ಅಸ್ವಸ್ಥರಾಗಿದ್ದರು. ಅವರಲ್ಲಿ ಮಗಳು ಮೂರು ಮಕ್ಕಳ ತಾಯಿಯಾಗಿರುವ ಲೀಲಾವತಿಯವರಿಗೆ ವಾಂತಿ, ಭೇದಿ ಆರ೦ಭವಾಗಿ ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಅಸೌಖ್ಯ ತೀವ್ರಗೊ೦ಡು ನಿನ್ನೆ ಹೆಚ್ಚಿನ ಚಿಕಿತ್ಸೆಗಾಗಿ ಮ೦ಗಳೂರಿಗೆ ಕೊ೦ಡೊಯ್ಯುವಾಗ ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ.

Leave a Comment

Your email address will not be published. Required fields are marked *