ಕುಂದಾಪುರ: ಚೂರಿ ಇರಿತಕ್ಕೊಳಗಾದ ವ್ಯಕ್ತಿ ಮೃತ್ಯು

ಸಮಗ್ರ ನ್ಯೂಸ್:ಕುಂದಾಪುರದಲ್ಲಿ ಅ. 1ರಂದು ಚೂರಿ ಇರಿತಕ್ಕೊಳಗಾಗಿ ಗಂಭೀರ ಗಾಯಗೊಂಡಿದ್ದ ಖಾರ್ವಿಕೇರಿ ನಿವಾಸಿ ಬನ್ಸ್ ರಾಘು ಅಲಿಯಾಸ್ ರಾಘವೇಂದ್ರ ಶೇರಿಗಾರ್(42) ಅವರು ಚಿಕಿತ್ಸೆ ಫಲಿಸದೆ ಅ. 2ರಂದು ಮೃತ ಪಟ್ಟಿದ್ದಾರೆ.

Ad Widget ... ..

ಭಾನುವಾರ(ಅ.1) ಸಂಜೆ ಸುಮಾರು 7 ಗಂಟೆಗೆ ರಾಘವೇಂದ್ರ ಅವರು ಕಾರಿನಲ್ಲಿ ಕುಂದಾಪುರದ ಚಿಕ್ಕನ್ ಸಾಲ್ ರಸ್ತೆಯ ಅಂಚೆ ಕಚೇರಿ ಸಮೀಪ ಇರುವ ನ್ಯೂ ಡೆಲ್ಲಿ ಬಜಾರ್ ಅಂಗಡಿ ಬಳಿ ಹೋಗುತ್ತಿರುವಾಗ ವ್ಯಾಗನರ್ ಕಾರಿನಲ್ಲಿ ಬಂದಿದ್ದ ವ್ಯಕ್ತಿಯೊಬ್ಬ ಚೂರಿಯಿಂದ ರಾಘವೇಂದ್ರ ಅವರ ತೊಡೆಗೆ ಇರಿದು ಪರಾರಿಯಾಗಿದ್ದ.

Ad Widget

ಗಂಭೀರವಾಗಿ ಗಾಯಗೊಂಡಿದ್ದ ರಾಘು ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರಾಘವೇಂದ್ರ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಕುಂದಾಪುರ ನಗರ ಠಾಣೆಯಲ್ಲಿ ಪ್ರಖರಣ ದಾಖಲಾಗಿದೆ.

Leave a Comment

Your email address will not be published. Required fields are marked *