ಕಾಸರಗೋಡು: ನಿಂತಿದ್ದ ಪಿಕಪ್ ವ್ಯಾನ್ ಗೆ ಕೆಎಸ್ಅರ್ ಟಿಸಿ ಬಸ್ ಡಿಕ್ಕಿ| ಓರ್ವ ಮೃತ್ಯು

ಸಮಗ್ರ ನ್ಯೂಸ್: ಪಿಕಪ್ ವ್ಯಾನ್ ಗೆ ಕೆಎಸ್ ಆರ್ ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಮೃತಪಟ್ಟ ಘಟನೆ ಸೆ 26 ರಂದು ಕರ್ನಾಟಕ ಗಡಿ ಪ್ರದೇಶವಾದ ಅಡ್ಕಸ್ಥಳದ ಸಮೀಪ ನಡೆದಿದೆ.

Ad Widget ... ..

ಪಿಕಪ್ ವ್ಯಾನ್ ಚಾಲಕ ಪೆರ್ಲ ಮಣಿಯಂಪಾರೆ ಪಜ್ಜನದ ಮುಸ್ತಾಫ (43) ಅವರು ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಮೃತಪಟ್ಟಿದ್ದಾರೆ.

Ad Widget

ಅಡಿಕೆ ಗಿಡಗಳನ್ನು ಹೇರಿಕೊಂಡು ಬರುತ್ತಿದ್ದ ಪಿಕಪ್ ರಸ್ತೆ ಬದಿ ನಿಲ್ಲಿಸಲಾಗಿತ್ತು. ಈ ನಡುವೆ ಎದುರಿನಿಂದ ಬರುತ್ತಿದ್ದ ಬಸ್ಸು ಮುಂದಿನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲೆತ್ನಿಸಿದಾಗ ರಸ್ತೆ ಬದಿ ನಿಲ್ಲಿಸಿದ್ದ ಪಿಕಪ್ ವ್ಯಾನ್ ಗೆ ಡಿಕ್ಕಿ ಹೊಡೆದಿದೆ.

ತಲೆಗೆ ಗಂಭೀರ ಗಾಯಗೊಂಡ ಮುಸ್ತಾಫರವರನ್ನು ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ದರೂ ಚಿಕಿತ್ಸೆ ಫಲಿಸದೆ ಮೃತ ಪಟ್ಟಿದ್ದಾರೆ. ಪಿಕಪ್ ವ್ಯಾನ್ ನಲ್ಲಿದ್ದ ಇನ್ನೋರ್ವ ಗಾಯಗೊಂಡಿದ್ದಾರೆ. ಬದಿಯಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Comment

Your email address will not be published. Required fields are marked *