ಕೇರಳ: ತಿರುಓಣಂ ಬಂಪರ್​ ಲಾಟರಿಯಲ್ಲಿ ಕೋಟಿ ಗೆದ್ದ ಪಾಲಕ್ಕಾಡ್​ ವ್ಯಕ್ತಿ

ಸಮಗ್ರ ನ್ಯೂಸ್: ಕೇರಳ ರಾಜ್ಯ ಲಾಟರಿ ಇಲಾಖೆಯು ಸೆ. 20ರಂದು
ಮಧ್ಯಾಹ್ನ ಈ ವರ್ಷದ ತಿರುಓಣಂ ಬಂಪರ್ ಬಿಆರ್ 93 ಲಾಟರಿಯ ಲಕ್ಕಿ ಡ್ರಾ ವಿಜೇತರ ಲಾಟರಿ ಟಿಕೆಟ್ ಸಂಖ್ಯೆಗಳನ್ನು ಬಿಡುಗಡೆ ಮಾಡಿದೆ.

Ad Widget ... ..

ತಿರುವನಂತಪುರಂನ ಗೋರ್ಕಿ ಭವನದಲ್ಲಿ ನಡೆದ ಲಾಟರಿ ಡ್ರಾ ಸಮಾರಂಭದಲ್ಲಿ ಕೇರಳದ ಹಣಕಾಸು ಸಚಿವ ಕೆ.ಎನ್.ಬಾಲಗೋಪಾಲ್ ಅವರು ಬಂಪರ್ ಲಾಟರಿ 2023 ವಿಜೇತರನ್ನು ಘೋಷಿಸಿದ್ದಾರೆ. ಈ ಅದೃಷ್ಟದ ಡ್ರಾದಲ್ಲಿ ಟಿಕೆಟ್ ಸಂಖ್ಯೆ TE 230662 ಪ್ರಥಮ ಬಹುಮಾನವನ್ನು ಗಳಿಸಿದ್ದು, ಈ ಟಿಕೆಟ್​ಗೆ 25 ಕೋಟಿ ರೂಪಾಯಿ ಬಹುಮಾನ ದೊರಕಿದೆ.

Ad Widget

ಅದೇ ಡ್ರಾದಲ್ಲಿ ಇನ್ನೂ 20 ಮಂದಿ ದ್ವಿತೀಯ ಬಹುಮಾನ ಪಡೆದಿದ್ದಾರೆ. ಪ್ರತಿಯೊಬ್ಬರಿಗೂ ತಲಾ ಒಂದು ಕೋಟಿ ಬಹುಮಾನ ಪಡೆದಿದ್ದಾರೆ. ಮೂರನೇ ಬಹುಮಾನದಡಿ 20 ಮಂದಿಗೆ 50 ಲಕ್ಷ ರೂಪಾಯಿ, ನಾಲ್ಕನೇ ಬಹುಮಾನದಡಿ 10 ಜನರಿಗೆ ತಲಾ 5 ಲಕ್ಷ ರೂಪಾಯಿ ಸಿಗಲಿದೆ.

ಈ ವರ್ಷ ವಿಷು ಬಂಪರ್ ಬಿಆರ್ 91 ಅಡಿಯಲ್ಲಿ ಆಯೋಜಿಸಿದ್ದ ಲಾಟರಿಯಲ್ಲಿ ವಿಇ 475588 ಪ್ರಥಮ ಬಹುಮಾನ ಪಡೆದಿದೆ. ಈ ಲಾಟರಿ ಟಿಕೆಟ್ 12 ಕೋಟಿ ರೂ ಸಿಗಲಿದೆ. ಕಳೆದ ವರ್ಷ 3,97,911 ಮಂದಿ ಓಣಂ ಬಂಪರ್ ಬಹುಮಾನದಡಿ ವಿವಿಧ ಬಹುಮಾನಗಳನ್ನು ಗೆದ್ದಿದ್ದಾರೆ. 25 ಕೋಟಿ ಗೆದ್ದಿರುವ TE 230662 ಟಿಕೆಟ್​ ಖರೀದಿದಾರ ಶೇಕಡಾ 30 ರಷ್ಟು ಆದಾಯ ತೆರಿಗೆ ಕಡಿತದ ನಂತರ ಸುಮಾರು 17.5 ಕೋಟಿ ರೂಪಾಯಿಗಳನ್ನು ಪಡೆಯುವ ನಿರೀಕ್ಷೆಯಿದೆ. ಮನೋರಮಾ ಆನ್‌ಲೈನ್ ಪ್ರಕಾರ, ವಿಜೇತ ಟಿಕೆಟ್ ಅನ್ನು ಪಾಲಕ್ಕಾಡ್‌ನ ವಾಲಾಯರ್‌ ಏಜೆಂಟ್​ಗಳಿಂದ ಖರೀದಿಸಿದ್ದಾರೆ ಎನ್ನಲಾಗಿದೆ.

Leave a Comment

Your email address will not be published. Required fields are marked *