ಸಮಗ್ರ ನ್ಯೂಸ್: ಡೀಲ್ ಪ್ರಕರಣದಲ್ಲಿ ಆರೋಪಿಯಾಗಿರುವ ಚೈತ್ರಾ ಕುಂದಾಪುರ ಮೇಲೆ ಕೋಟ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಎಫ್ಐಆರ್ ದಾಖಲಾಗಿದೆ
ಕೋಟ ಪೊಲೀಸ್ ಠಾಣೆ ವ್ಯಾಪ್ತಿಯ ಸುದಿನಾ ಎಂಬವರು ಈ ಪ್ರಕರಣ ದಾಖಲಿಸಿದ್ದು ಚೈತ್ರಾ ಕುಂದಾಪುರ 5 ಲಕ್ಷ ಹಣವನ್ನು ಪಡೆದು ವಂಚಿಸಿರುವುದಾಗಿ ದೂರು ನೀಡಿದ್ದಾರೆ. 2018ರಲ್ಲಿ 5 ಲಕ್ಷ ಹಣ ಪಡೆದು ಚೈತ್ರಾ ವಂಚಿಸಿದ್ದು, ಅಕೌಂಟ್ ಮುಖಾಂತರ 3 ಲಕ್ಷ ಹಣವನ್ನು ಸುದಿನಾ ಕಳುಹಿಸಿದ್ದಾರೆ. ಬಳಿಕ 2 ಲಕ್ಷ ನಗದು ಹಣವನ್ನೂ ಚೈತ್ರಾಳಿಗೆ ನೀಡಿದ್ದಾರೆ. ಇದಾದ ಬಳಿಕ ಚೈತ್ರಾ ಕುಂದಾಪುರ ಇತ್ತ ಅಂಗಡಿಯೂ ಇಲ್ಲ, ಅತ್ತ ಹಣವೂ ಇಲ್ಲದಂತೆ ಮಾಡಿದ್ದು, ಹಣ ವಾಪಸ್ ಕೇಳಿದರೆ ಅತ್ಯಾಚಾರ ಪ್ರಕರಣ ದಾಖಲು ಮಾಡೋದಾಗಿ ಬೆದರಿಕೆ ಹಾಕಿದ್ದಾರೆ. ಬೆದರಿಕೆಯಿಂದ ಚೈತ್ರಾ ವಿರುದ್ಧ ದೂರು ಕೊಡದೆ ದೂರ ಉಳಿದಿದ್ದಾಗಿ ಸುದಿನಾ ಹೇಳಿದ್ದಾರೆ.