ಸಮಗ್ರ ನ್ಯೂಸ್: ಗೌರಿ ಗಣೇಶ ಹಬ್ಬದ ದಿನವಾದ ಇಂದು ಮೋದಿ ಸರ್ಕಾರದ 5 ದಿನದ ವಿಶೇಷ ಅಧಿವೇಶನ ಆರಂಭ ಆಗುತ್ತೆ. ಹಳೇ ಸಂಸತ್ ಕಟ್ಟಡದಲ್ಲಿ ಅಧಿವೇಶನ ನಡೆದರೆ, ಮಂಗಳವಾರದಿಂದ ನೂತನ ಸಂಸತ್ ಭವನ ಸೆಂಟ್ರಲ್ ವಿಸ್ತಾದಲ್ಲಿ ಅಧಿವೇಶನ ಮುಂದುವರೆಯಲಿದೆ.
ಆದರೆ ಇದಕ್ಕೂ ವಿಪಕ್ಷಗಳು ಅಪಸ್ವರ ಎತ್ತಿದ್ದರೂ ,ಸಂಸತ್ ಕಲಾಪದಲ್ಲಿ ಬಿಜೆಪಿ (BJP) ಪ್ರಮುಖವಾಗಿ 5 ಬಿಲ್ಗಳನ್ನ ಮಂಡಿಸಲು ತಯಾರಿ ಮಾಡಿಕೊಂಡಿದೆ.
ಮೋದಿ ಸರ್ಕಾರ ದಿಢೀರ್ ಅಂತ ವಿಶೇಷ ಅಧಿವೇಶನ ಏರ್ಪಡಿಸಿದೆ. ಇಂದಿನಿಂದ ಸೆಪ್ಟೆಂಬರ್ 22ರವರೆಗೆ ಸಂಸತ್ ಕಲಾಪ ನಡೆಯಲಿದೆ. ಇಂದು ಹಳೇ ಸಂಸತ್ ಕಟ್ಟಡದಲ್ಲಿ ಅಧಿವೇಶನ ನಡೆಯಲಿದ್ದು, ಮಂಗಳವಾರದಿಂದ ನೂತನ ಸಂಸತ್ ಭವನ ಸೆಂಟ್ರಲ್ ವಿಸ್ತಾದಲ್ಲಿ ಅಧಿವೇಶನ ಮುಂದುವರೆಯಲಿದೆ.
ನೂತನ ಸಂಸತ್ ಭವನಕ್ಕೆ ಮಂಗಳವಾರದಿಂದ ಕಲಾಪ ಶಿಫ್ಟ್ ಆಗಲಿದೆ. ಹೀಗಾಗಿ ಸೆಂಟ್ರಲ್ ವಿಸ್ತಾ ಕಟ್ಟಡದ ಮೇಲೆ ಉಪರಾಷ್ಟ್ರಪತಿ ಹಾಗು ರಾಜ್ಯಸಭೆ ಪೀಠಾಧ್ಯಕ್ಷ ಜಗದೀಪ್ ಧನ್ಕರ್, ಲೋಕಸಭೆ ಸ್ಪೀಕರ್ ಓಂಬಿರ್ಲಾ ಪ್ರಪ್ರಥಮವಾಗಿ ತಿರಂಗಧ್ವಜ ಹಾರಿಸಿದ್ದಾರೆ. ಇಂದಿನಿಂದ ನಾಳೆಯಿಂದ ಆರಂಭವಾಗಲಿರುವ ಸಂಸತ್ ಕಲಾಪದಲ್ಲಿ ಬಿಜೆಪಿ ಪ್ರಮುಖವಾಗಿ 5 ಬಿಲ್ಗಳನ್ನ ಮಂಡಿಸಲು ತಯಾರಿ ನಡೆಸಿದೆ. ಇನ್ನೊಂದ್ಕಡೆ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ತಮ್ಮದೇ ಅಜೆಂಡಾಗಳನ್ನ ರೆಡಿಮಾಡಿವೆ.
ವಿಶೇಷ ಕಲಾಪದಲ್ಲಿ ಮಂಡನೆಯಾಗಲಿರುವ ಬಿಲ್ ಗಳಿವು:
1)NDA ಅಸ್ತ್ರ-01: ಕೇಂದ್ರ/ರಾಜ್ಯ ಚುನಾವಣಾ ಆಯುಕ್ತರ ನೇಮಕಾತಿ ತಿದ್ದುಪಡಿ ವಿಧೇಯಕ-2023
2)NDA ಅಸ್ತ್ರ-02: ‘ವಕೀಲರ ತಿದ್ದುಪಡಿ ವಿಧೇಯಕ’ ತಿದ್ದುಪಡಿ-2023
3)NDA ಅಸ್ತ್ರ-03: ‘ಅಂಚೆ ಕಚೇರಿ ವಿಧೇಯಕ’ ತಿದ್ದುಪಡಿ-2023
4)NDA ಅಸ್ತ್ರ-04: ನಿಯತಕಾಲಿಕಗಳ ಪತ್ರಿಕಾ ಮತ್ತು ನೋಂದಣಿ ಮಸೂದೆ-2023
5) NDA ಅಸ್ತ್ರ-05: ನೋಂದಣಿ ರದ್ದತಿ ಮತ್ತು ತಿದ್ದುಪಡಿ ಮಸೂದೆ, 2023