ಮಂಗಳೂರು: ಮುಸ್ಲಿಂ ಯುವಕನ ಮೇಲೆ ತಲವಾರು ದಾಳಿ | ಹಿಂದೂ ಯುವಕರ ಬಂಧನ

ಸಮಗ್ರ ನ್ಯೂಸ್:ಅನ್ಯಕೋಮಿನ ವ್ಯಕ್ತಿಯ ಮೇಲೆ ತಲವಾರು ದಾಳಿ ನಡೆಸಿದ ಪ್ರಕರಣ ಆ.20 ರಂದು ನಡೆದಿದೆ. ಕೃತ್ಯ ನಡೆದ 24 ಗಂಟೆಯೊಳಗಡೆ ಮೂವರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

Ad Widget ... ..

ಪಂಜಿಮೊಗರು ನಿವಾಸಿ ಚರಣ್ ರಾಜ್ (23), ಸುಮಂತ್‌ ಬರ್ಮನ್‌ (24), ಅವಿನಾಶ್ (24) ಬಂಧಿತರು ಆ ರೋಪಿಗಳ ಬಳಿಯಿಂದ ಕೃತ್ಯಕ್ಕೆ ಬಳಸಿದ ತಲವಾರು ಹಾಗೂ ದ್ವಿಚಕ್ರವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Ad Widget

ಮಂಗಳೂರು ಹೊರವಲಯದ ಕಾವೂರು ಎಂ.ವಿ.ಶೆಟ್ಟಿ ಕಾಲೇಜು ಬಳಿ ಕೃತ್ಯ ನಡೆದಿತ್ತು. ಸ್ಕೂಟಿಯಲ್ಲಿ ಬಂದ ದುಷ್ಕರ್ಮಿಗಳ ತಂಡ ಅನ್ಯ ಕೋಮಿನ ವಕ್ತಿಯನ್ನು ಅಡ್ಡ ಹಾಕಿ ತಲವಾರು ದಾಳಿ ಬೀಸಿದ್ದರು. ಈ ವೇಳೆ ಆ ವ್ಯಕ್ತಿ ತಲವಾರು ದಾಳಿಯಿಂದ ತಪ್ಪಿಸಿಕೊಂಡರೂ ಮುಖಕ್ಕೆ ಗಾಯವಾಗಿತ್ತು.

ಈ ಕುರಿತು ಅನ್ಯ ಕೋಮಿನ ವ್ಯಕ್ತಿ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಕಾರ್ಯಚರಣೆ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ ಆಯುಧ ಹಾಗೂ ವಾಹನವನ್ನು ವಶಕ್ಕೆ ಪಡೆದಿದ್ದಾರೆ.

Leave a Comment

Your email address will not be published. Required fields are marked *