ಹಾಸನ:ವಿದ್ಯುತ್ ಸರಿಯಾಗಿ ನೀಡುತ್ತಿಲ್ಲ ಎಂದು ಲೈನ್‍ಮೆನ್ ಮೇಲೆ ಹಲ್ಲೆ

ಸಮಗ್ರ ನ್ಯೂಸ್: ಸರಿಯಾಗಿ ವಿದ್ಯುತ್ ನೀಡುತ್ತಿಲ್ಲ ಎಂದು ಆರೋಪಿಸಿ ಚೆಸ್ಕಾಂ ನೌಕರರ ಮೇಲೆ ಯುವಕರು ಹಲ್ಲೆ ನಡೆಸಿರುವ ಘಟನೆ ಹೊಳೆನರಸೀಪುರದ ಕಡವಿನಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.

Ad Widget ... ..

ಪ್ರದೀಪ್ ಹಾಗೂ ಕೃಷ್ಣಮೂರ್ತಿ ಎಂಬ ಚೆಸ್ಕಾಂ ಸಿಬ್ಬಂದಿಗಳಿಗೆ ಆ 18ರಂದು ಸಂಜೆ ಇಬ್ಬರೂ ನೌಕರರು ಕಡವಿನಹೊಸಹಳ್ಳಿ ಗ್ರಾಮದಲ್ಲಿ ವಿದ್ಯುತ್ ಲೈನ್ ದುರಸ್ತಿ ಮಾಡುತ್ತಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಯುವಕರು ಸರಿಯಾಗಿ ಕರೆಂಟ್ ಕೊಡುತ್ತಿಲ್ಲ ಎಂದು ಲೈನ್‍ಮೆನ್‍ಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಜಗಳ ಮಾಡಿದ್ದಾರೆ. ಬಳಿಕ ಇದು ವಿಕೋಪಕ್ಕೆ ತಿರುಗಿ ದೊಣ್ಣೆಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಹಲ್ಲೆ ನಡೆಸಿದ ಯುವಕರನ್ನು ಗ್ರಾಮದ ಪುನೀತ್ ಹಾಗೂ ರಾಕೇಶ್ ಎಂದು ಗುರುತಿಸಲಾಗಿದೆ.

Ad Widget

Leave a Comment

Your email address will not be published. Required fields are marked *