ಹವಾಮಾನ ವರದಿ| ಕರಾವಳಿಯಲ್ಲಿ ಗುಡುಗು ಸಹಿತ ಬಿರುಸಿನ ಮಳೆ| ಇನ್ನೆರಡು ದಿನ ಉತ್ತಮ ಮಳೆ ಮುನ್ಸೂಚನೆ

ಸಮಗ್ರ ನ್ಯೂಸ್: ಕರ್ನಾಟಕ ಕರಾವಳಿಯ ಹಲವೆಡೆ ಶುಕ್ರವಾರ (ಆಗಸ್ಟ್ 18) ಸಂಜೆಯ ಬಳಿಕ ಗುಡುಗು ಸಹಿತ ಮಳೆಯಾಗಿದ್ದು, ಮತ್ತೆ ಬಿರುಸಿನ ಮಳೆ ಸಾಧ್ಯತೆಯನ್ನು ಹವಾಮಾನ ಇಲಾಖೆ ನೀಡಿದೆ. ಶುಕ್ರವಾರ ಕೆಲವು ಕಡೆಗಳಲ್ಲಿ ಮೋಡ ಕವಿದ ವಾತಾವರಣ ಇದ್ದು, ಮಳೆಯ ಮುನ್ಸೂಚನೆಯನ್ನೂ ನೀಡಿತ್ತು.

Ad Widget ... ..

ರಾಜ್ಯದ ಕರಾವಳಿ ಜಿಲ್ಲೆಗಳ ಬಹುತೇಕ ಕಡೆಗಳಲ್ಲಿ ಹಾಗೂ ಒಳನಾಡು ವ್ಯಾಪ್ತಿಯಲ್ಲಿ ಅಲ್ಲಲ್ಲಿ ಇಂದು ಶನಿವಾರ ಮತ್ತು ನಾಳೆ ಭಾನುವಾರ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ.

Ad Widget

ಸಮುದ್ರದಲ್ಲೂ ಅಲೆಗಳು ಏಳುವ ಸಾಧ್ಯತೆ ಇದ್ದು, ಸೆಕೆಂಡಿಗೆ 0.4 ಮೀಟರ್ ನಿಂದ 1 ಮೀಟರ್ ವರೆಗೆ ಅಲೆಗಳು ಅಬ್ಬರಿಸಲಿವೆ. ಸಾಮಾನ್ಯವಾಗಿ ಸೆಕೆಂಡಿಗೆ 05-43 ಸೆಂ.ಮೀ. ಎತ್ತರದೊಂದಿಗೆ ಅಲೆಗಳು ಬರುತ್ತವೆ. ಅಲ್ಲದೆ, ಗುಡುಗು, ಮಿಂಚಿನೊಂದಿಗೆ ಸುಮಾರು 30ರಿಂದ 40 ಕಿ.ಮೀ. ವೇಗದಲ್ಲಿ (ಗಂಟೆಗೆ) ಮಳೆಯಾಗುವ ಸಾಧ್ಯತೆಯನ್ನು ಹವಾಮಾನ ಇಲಾಖೆ ನೀಡಿದ್ದು, ಇದು ಮುಂದಿನ ಎರಡು ದಿನಗಳವರೆಗೆ ಇರಲಿದೆ.

Leave a Comment

Your email address will not be published. Required fields are marked *