ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ-2’ಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ| ಇಲ್ಲಿದೆ ವಿಷಯವಾರು ವೇಳಾಪಟ್ಟಿ

ಸಮಗ್ರ ನ್ಯೂಸ್: ಆಗಸ್ಟ್.21ರಿಂದ ಸೆಪ್ಟೆಂಬರ್ 2ರವೆರೆಗೆ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ-2 ಆರಂಭಗೊಳ್ಳಲಿದೆ. ಪರೀಕ್ಷೆಗೆ ಹಾಜರಾಗುವಂತ ಅನುತ್ತೀರ್ಣ ವಿದ್ಯಾರ್ಥಿಗಳಿಗೆ ಯಾವೆಲ್ಲಾ ಕ್ರಮವಹಿಸಬೇಕು ಪರೀಕ್ಷಾ ಕೇಂದ್ರಕ್ಕೆ ಹಾಜರಾಗುವ ಬಗ್ಗೆ ಪಿಯು ಬೋರ್ಡ್ ಮಹತ್ವದ ಮಾಹಿತಿಯನ್ನು ಬಿಡುಗಡೆ ಮಾಡಿದೆ.

Ad Widget ... ..

ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಮಾಹಿತಿಯನ್ನು ಬಿಡುಗಡೆ ಮಾಡಲಾಗಿದ್ದು, ಆ. 21ರಂದು ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ-2 ಆರಂಭವಾಗಲಿದೆ. ಪರೀಕ್ಷೆಯಂದು ಪರೀಕ್ಷಾ ಕೇಂದ್ರದ ಒಳಗೆ ಮೊಬೈಲ್ ಹಾಗೂ ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳನ್ನು ಕೊಂಡೊಯ್ಯುವಂತಿಲ್ಲ ಎಂಬುದಾಗಿ ತಿಳಿಸಿದೆ.

Ad Widget

ಪರೀಕ್ಷಾ ಕೇಂದ್ರದೊಳಗೆ ಸಾಮಾನ್ಯ ಕ್ಯಾಲ್ಕುಲೇಟರ್ ಕೊಂಡೋಯ್ಯಲು ಅವಕಾಶವಿದ್ದು, ಇದರ ಹೊರತಾಗಿ ಸೈಂಟಿಫಿಕ್ ಕ್ಯಾಲ್ಯುಕಲೇಟರ್ ಬಳಕೆ ನಿಷೇಧಿಸಲಾಗಿದೆ. ಪರೀಕ್ಷಾ ಕೇಂದ್ರದ ಸುತ್ತಾಮುತ್ತಾ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಪರೀಕ್ಷೆ ನಡೆಯುವಂತ ಪರೀಕ್ಷಾ ಕೇಂದ್ರದ ಸಮೀಪದ ಜೆರಾಕ್ಸ್ ಅಂಗಡಿಗಳನ್ನು ಬಂದ್ ಮಾಡುವಂತೆ ಸೂಚಿಸಲಾಗಿದೆ. ಈ ಎಲ್ಲಾ ನಿಯಮಗಳನ್ನು ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ-2ಗೆ ಹಾಜರಾಗುವಂತ ವಿದ್ಯಾರ್ಥಿಗಳು ಕಡ್ಡಾಯವಾಗಿ ಪಾಲಿಸದೇ ಇದ್ದಲ್ಲಿ ಅಂತಹವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆಯನ್ನು ನೀಡಿದೆ.

ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ-2ರ ವಿಷಯವಾರು ವೇಳಾಪಟ್ಟಿ:

21-08-2೦23 ಸೋಮವಾರ – ಕನ್ನಡ ಹಾಗೂ ಅರೇಬಿಕ್
22-08-23 ಮಂಗಳವಾರ ಐಚ್ಛಿಕ ಕನ್ಬಡ, ರಾಸಾಯನ, ಮೂಲಗಣಿತ
23-08-23 ಬುಧವಾರ- ಸಮಾಜ ಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗಣಕ ವಿಜ್ಞಾನ
24-08-23 ಗುರುವಾರ- ತರ್ಕ ಶಾಸ್ತ್ರ, ಹಿಂದೂಸ್ಥಾನಿ ಸಂಗೀತ, ವ್ಯಾವಹಾರ ಅಧ್ಯಯನ
25-08-23 ಶುಕ್ರವಾರ – ಇತಿಹಾಸ, ಸಂಖ್ಯಾಶಾಸ್ತ್ರ
26-08-23 ಶನಿವಾರ – ಇಂಗ್ಲಿಷ್
28-08-23 ಸೋಮವಾರ – ಭೂಗೋಳಶಾಸ್ತ್ರ, ಮನಃ ಶಾಸ್ತ್ರ, ಭೌತಶಾಸ್ತ್ರ
29-08-23 ಮಂಗಳವಾರ – ಭೂಗರ್ಭ ಶಾಸ್ತ್ರ, ಶಿಕ್ಷಣ ಶಾಸ್ತ್ರ, ಗೃಹ ಶಾಸ್ತ್ರ
30-08-23 ಬುಧವಾರ – ರಾಜ್ಯ ಶಾಸ್ತ್ರ, ಗಣಿತ ಶಾಸ್ತ್ರ
31-08-23 ಗುರುವಾರ – ಹಿಂದಿ
01-09-2023 ಶುಕ್ರವಾರ – ಅರ್ಥ ಶಾಸ್ತ್ರ, ಜೀವಶಾಸ್ತ್ರ

Leave a Comment

Your email address will not be published. Required fields are marked *