ವಿರಾಜಪೇಟೆ: ಸಾಕು ನಾಯಿ ದಾಳಿಗೆ ನರ್ಸ್ ತೀವ್ರ ಗಾಯ

ಸಮಗ್ರ ನ್ಯೂಸ್: ಮನೆ ಬೇಟಿಯ ವೇಳೆ ಸಾಕು ನಾಯಿಯು ನರ್ಸ್ ಮೇಲೆ ದಾಳಿ ನಡೆಸಿ ತೀವ್ರ ಗಾಯಗೊಳಿಸಿರುವ ಘಟನೆ ವಿರಾಜಪೇಟೆ ಸಮೀಪದ ಪಾರಣೆಯಲ್ಲಿ ನಡೆದಿದೆ.

Ad Widget ... ..

ತೀವ್ರ ಗಾಯಗಳಾಗಿ ನರ್ಸ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಗ್ಯ ವಿಚಾರಣೆಗೆಂದು ಮನೆಗೆ ಬೇಟಿ ನೀಡಿದ್ದ ನರ್ಸ್ ಮೇಲೇರಗಿದ ನಾಯಿ ಎಡ ಭುಜಕ್ಕೆ ತೀವ್ರ ಸ್ವರೂಪದ ಗಾಯಗಳನ್ನು ಉಂಟುಮಾಡಿದೆ.

Ad Widget

ಪಟ್ಟಣ-ನಗರ ಪ್ರದೇಶದಲ್ಲಿ ಬೀದಿ ನಾಯಿಗಳ ಕಾಟವಾದರೆ, ಈಗ ಕೆಲವೊಂದು ಮನೆಗಳಲ್ಲಿ ಸಾಕು ನಾಯಿಗಳ ಕಾಟ ಹೆಚ್ಚಾಗಿದೆ. ಇದರಿಂದ ದಾದಿಯರು, ಆಶಾ ಕಾರ್ಯಕರ್ತರು, ಅಂಗನವಾಡಿ ಶಿಕ್ಷಕರು ಮನೆ-ಮನೆ ಬೇಟಿ ನೀಡುವುದಕ್ಕೆ ಹಿಂಜರಿಯುವ ಪರಿಸ್ಥಿತಿ ನಿರ್ಮಾಣವಾಗಿದೆ.

Leave a Comment

Your email address will not be published. Required fields are marked *