ಸಮಗ್ರ ನ್ಯೂಸ್: ಮಧ್ಯರಾತ್ರಿ ಕಳ್ಳರು ಗ್ಯಾಸ್ ಕಟ್ಟರ್ ಬಳಸಿ ಕೆನರಾ ಬ್ಯಾಂಕ್ ಎಟಿಎಂಯನ್ನು ದರೋಡೆ ಮಾಡಿರುವ ಘಟನೆ ಚಿಕ್ಕಮಗಳೂರು ನಗರದ ಹೌಸಿಂಗ್ ಬೋರ್ಡ್ ನಲ್ಲಿ ನಡೆದಿದೆ.
ಸಿ.ಸಿ ಟಿ.ವಿಯನ್ನ ನಿಷ್ಕ್ರಿಯಗೊಳಿಸಿ ಕಳ್ಳರು ತಮ್ಮ ಕೈ ಚಳಕ ತೋರಿದ್ದಾರೆ, ಮತ್ತು ಎಟಿಎಂನಲ್ಲಿದ್ದ 14 ಲಕ್ಷ ಹಣ ಲೂಟಿ ಮಾಡಿ ಕಳ್ಳರು ತಪ್ಪಿಸಿಕೊಂಡಿದ್ದಾರೆ ಎನ್ನಲಾಗಿದೆ.
ನಂತರ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಕೆನರಾ ಬ್ಯಾಂಕ್ ಅಧಿಕಾರಿಗಳು ಹಾಗೂ ಪೊಲೀಸರು ಪರಿಶೀಲಿಸಿ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.







