ಸುಳ್ಯ: ಐವರ್ನಾಡು ಜುಮಾ ಮಸ್ಜಿದ್ ನಲ್ಲಿ ವಾರ್ಷಿಕ ಮಹಾ ಸಭೆ

ಸಮಗ್ರ ನ್ಯೂಸ್:ಸುಳ್ಯದ ಐವರ್ನಾಡಿನ ಜುಮಾ ಮಸ್ಜಿದ್ ನ ವಾರ್ಷಿಕ ಮಹಾಸಭೆಯು ಆ. 11ರಂದು ನುಸ್ರತುಲ್ ಇಸ್ಲಾಂ ಮದ್ರಸ ಹಾಲ್ ನಲ್ಲಿ ನಡೆಯಿತು.

. Ad Widget . Ad Widget

ಅಧಿಕಾರಿಗಳು ಕಾನೂನು ಮಾಹಿತಿ ನೀಡಿ, ನಂತರ ಇಕ್ಬಾಲ್ ಎಲಿಮಲೆ, ತಾಜ್ ಮಹಮ್ಮದ್ ಸಂಪಾಜೆ ಹಾಗೂ ಮೂಸಾ ಪೈಂಬಚ್ಚಾಲ್ ರವರು ಮಾತನಾಡಿ ಸೂಕ್ತ ಸಲಹೆ ಹಾಗೂ ಮಾರ್ಗದರ್ಶನಗಳನ್ನು ನೀಡಿದರು. ಬಳಿಕ ನಡೆದ ಸಭೆಯಲ್ಲಿ ನೂತನ ಕಮಿಟಿ ರಚಿಸಲಾಯಿತು. ಅಧ್ಯಕ್ಷರಾಗಿ ಶರೀಫ್ ನಿಡುಬೆ, ಕಾರ್ಯದರ್ಶಿಯಾಗಿ ಅಬೂಬಕರ್ ಪರ್ಲಿಕಜೆ, ಉಪಾಧ್ಯಕ್ಷರಾಗಿ ಆದಂ ವಿ.ಕೆ., ಕೋಶಾಧಿಕಾರಿಯಾಗಿ ಅಬ್ದುಲ್ಲ ಪರ್ಲಿಕಜೆ ಹಾಗೂ ಸದಸ್ಯರಾಗಿ ಅಬೂಬಕ್ಕರ್ ಪಾಲೆಪ್ಪಾಡಿ ಅವರನ್ನು ಆರಿಸಲಾಯಿತು. ಸ್ವಲಾತ್ ನೊಂದಿಗೆ ಸಭೆ ಮುಕ್ತಾಯಗೊಂಡಿತು.

. Ad Widget . . Ad Widget . Ad Widget

ಈ ಸಂಧರ್ಭದಲ್ಲಿ ವಕ್ಫ್ ಅಧಿಕಾರಿ ಮುಸ್ತಫಾ, ಇಕ್ಬಾಲ್ ಎಲಿಮಲೆ, ತಾಜ್ ಮುಹಮ್ಮದ್ ಸಂಪಾಜೆ, ಹಾಗೂ ಮೂಸಾ ಪೈಂಬಚ್ಚಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *