ಸೌಜನ್ಯಳ ನ್ಯಾಯಕ್ಕಾಗಿ ಫೀಲ್ಡ್ ಗಿಳಿದ ಅರುಣ್ ಪುತ್ತಿಲ| ಆ.14ರಂದು ಪುತ್ತೂರಿನಲ್ಲಿ ”ನಮ್ಮ ನಡೆ ನ್ಯಾಯದ ಕಡೆ” ಜಾಥಾ ಹಾಗೂ ರಸ್ತೆ ತಡೆ

ಸಮಗ್ರ ನ್ಯೂಸ್: 11 ವರ್ಷಗಳ ಹಿಂದೆ ಅತ್ಯಾಚಾರ ನಡೆದು ಕೊಲೆಯಾದ ಸಹೋದರಿ ಸೌಜನ್ಯ ಪ್ರಕರಣಕ್ಕೆ ನ್ಯಾಯ ಒದಗಿಸಲು ಸರ್ಕಾರ ಮರುತನಿಖೆ ಕೈಗೊಳ್ಳಬೇಕು ಹಾಗೂ ನೈಜ ಆರೋಪಿಗಳ ಬಂಧನವಾಗಬೇಕೆಂದು ಒತ್ತಾಯಿಸಿ ಆಗಸ್ಟ್ 14 ರಂದು ಪುತ್ತಿಲ ಪರಿವಾರದ ವತಿಯಿಂದ ಪುತ್ತೂರಿನಲ್ಲಿ ‘ನಮ್ಮ ನಡೆ ನ್ಯಾಯದ ಕಡೆ’ ಬೃಹತ್ ಕಾಲ್ನಡಿಗೆ ಜಾಥ ಹಾಗೂ ರಸ್ತೆ ತಡೆ ನಡೆಯಲಿದೆ.

Ad Widget ... ..

ಆಗಸ್ಟ್ 14ರ ಸೋಮವಾರದಂದು ಬೆಳಿಗ್ಗೆ 9.30 ಕ್ಕೆ ದರ್ಬೆ ವೃತ್ತದಿಂದ ಕಾಲ್ನಡಿಗೆ ಜಾಥ ಪುತ್ತೂರು ಬಸ್ ನಿಲ್ದಾಣದವರೆಗೆ ತೆರಳಿ ಅಲ್ಲಿ ರಸ್ತೆ ತಡೆ ಮತ್ತು ಬೃಹತ್ ಪ್ರತಿಭಟನಾ ಸಭೆ ನಡೆಯಲಿದೆ.

Ad Widget

ಆ.8 ರ ಇಂದು ನಡೆದ ಪೂರ್ವಭಾವಿ ಸಭೆಯಲ್ಲಿ ಅರುಣ್ ಕುಮಾರ್ ಪುತ್ತಿಲ ಈ ವಿಷಯ ತಿಳಿಸಿದರು. ಸಭೆಯಲ್ಲಿ ಪುತ್ತಿಲ ಪರಿವಾರದ ಅಧ್ಯಕ್ಷರಾದ ಪ್ರಸನ್ನ ಕುಮಾರ್ ಮಾರ್ತಾ , ನಗರ ಅಧ್ಯಕ್ಷರಾದ ಅನಿಲ್ ತೆಂಕಿಲ, ಪ್ರಧಾನ ಕಾರ್ಯದರ್ಶಿ ಉಮೇಶ್ ವೀರಮಂಗಲ, ಪ್ರಮುಖರಾದ ಸುನೀಲ್ ಬೋರ್ಕರ್, ರವಿ ಕುಮಾರ್ ಕೆದಂಬಾಡಿ ಮಠ, ಪ್ರವೀಣ್ ಶೆಟ್ಟಿ ತಿಂಗಳಾಡಿ, ಕೃಷ್ಣಪ್ರಸಾದ್ ಶೆಟ್ಟಿ, ಚಂದ್ರಹಾಸ್ ಈಶ್ವರಮಂಗಲ, ಪ್ರೇಮ್ ರಾಜ್ ಆರ್ಲಪದವು ಸಹಿತ ಹಲವು ಪ್ರಮುಖರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *