ಹಳಿ ತಪ್ಪಿದ ಪ್ಯಾಸೆಂಜರ್ ರೈಲು| 15 ಜನ ಸಾವು; ಹಲವರು ಗಂಭೀರ

ಸಮಗ್ರ ನ್ಯೂಸ್: ಹತ್ತು ರೈಲು ಬೋಗಿಗಳು ಹಳಿ ತಪ್ಪಿದ ಪರಿಣಾಮ ಪಾಕಿಸ್ತಾನದಲ್ಲಿ ಕನಿಷ್ಠ 15 ಜನರು ಸಾವನ್ನಪ್ಪಿದ್ದಾರೆ ಮತ್ತು 50 ಜನರು ಗಾಯಗೊಂಡ ಘಟನೆ ಪಾಕಿಸ್ತಾನದಲ್ಲಿ ‌ನಡೆದಿದೆ.

Ad Widget ... ..

ಪಾಕಿಸ್ತಾನದ ರಾವಲ್ಪಿಂಡು ಸಮೀಪ ಘಟನೆ ನಡೆದಿದ್ದು, ಗಾಯಗೊಂಡ ಪ್ರಯಾಣಿಕರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ರೈಲು ಹಳಿ ತಪ್ಪಲು ಕಾರಣ ಇನ್ನೂ ತಿಳಿದುಬಂದಿಲ್ಲ. ಈ ವಿಷಯ ತಿಳಿದು ರಕ್ಷಣಾ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ, ಕಾರ್ಯಾಚರಣೆ ನಡೆಸುತ್ತಿದ್ದಾರೆ. ನೆರೆಯ ಆಸ್ಪತ್ರೆಗಳಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ.

Ad Widget

ಅಪಘಾತದ ಸ್ಥಳಕ್ಕೆ ಪರಿಹಾರ ರೈಲು ಹೊರಟಿದೆ ಮತ್ತು ಅದು ಶೀಘ್ರದಲ್ಲೇ ಬರಲಿದೆ ಎಂದು ಸ್ಥಳೀಯ ಆಡಳಿತಾಧಿಕಾರಿ ತಿಳಿಸಿದ್ದಾರೆ. ಅಪಘಾತದಿಂದಾಗಿ, ಯುಪಿ ಟ್ರ್ಯಾಕ್ನಲ್ಲಿ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ರೈಲ್ವೆ ವಿಭಾಗೀಯ ಅಧೀಕ್ಷಕ ಸುಕ್ಕೂರ್ ಮಹಮೂದುರ್ ರಹಮಾನ್ ಜಿಯೋ ನ್ಯೂಸ್ ಗೆ ತಿಳಿಸಿದ್ದಾರೆ.

Leave a Comment

Your email address will not be published. Required fields are marked *