Ad Widget .

ಪುತ್ತೂರು: ಎವಿಜಿ ಇಂಗ್ಲಿಷ್ ಮೀಡಿಯಂ ಸ್ಕೂಲಿನಲ್ಲಿ ಪೋಷಕರ ಸಭೆ , ಕೃತಜ್ಞತಾ ಸಭೆ

ಸಮಗ್ರ ನ್ಯೂಸ್: ಜು.29 ರಂದು ಬನ್ನೂರು ಕೃಷ್ಣನಗರ ಸಮೀಪದಲ್ಲಿರುವ ಎವಿಜಿ ಇಂಗ್ಲಿಷ್ ಮೀಡಿಯಂ ಸ್ಕೂಲಿನಲ್ಲಿ “ಪೋಷಕರ ಸಭೆ ಮತ್ತು ಕೃತಜ್ಞತಾ ಸಭೆ” ನಡೆಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲರಾದ ಸೀತಾರಾಮ ಕೇವಳ ಇವರು ಶೈಕ್ಷಣಿಕ ಚಿಂತನೆಯ ಕುರಿತು ಶಾಲೆಯ ಪೋಷಕರಿಗೆ ಹಾಗೂ ಶಿಕ್ಷಕರಿಗೆ ಸಲಹೆ ಸೂಚನೆಯನ್ನು ನೀಡಿದರು.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕರಾದ ಗುಡ್ಡಪ್ಪ ಗೌಡ ಬಲ್ಯ ಇವರು ಕೃತಜ್ಞತಾ ನುಡಿಯನ್ನಾಡುತ್ತ ಎವಿಜಿ ವಿದ್ಯಾಸಂಸ್ಥೆಯು ಆರಂಭವಾಗಲು ಶ್ರಮಿಸಿದ ಎಲ್ಲರಿಗೂ ಹಾಗೂ ಶಾಲೆಗೆ ವಿದ್ಯಾರ್ಥಿಗಳನ್ನು ಕಳುಹಿಸಿಕೊಟ್ಟ ಪೋಷಕ ವೃಂದದವರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತ , ಪುತ್ತೂರಿನಂತಹ ಪ್ರದೇಶದಲ್ಲಿ ಹೊಸ ಶಿಕ್ಷಣ ಸಂಸ್ಥೆಯನ್ನು ಆರಂಭಿಸುವುದು ಎವಿಜಿ ಸಂಸ್ಥೆಯ ಕನಸು ಆಗಿತ್ತು, ಆ ಕನಸನ್ನು ನನಸಾಗಿಸಲು ಸಂಸ್ಥೆಯ ಸಂಚಾಲಕರಾದ ಎ.ವಿ. ನಾರಾಯಣ, ಸಂಸ್ಥೆಯ ಅಧ್ಯಕ್ಷರಾದ ವೆಂಕಟರಮಣ ಗೌಡ ಕಳುವಾಜೆ ಹಾಗೂ ಇತರ ಆಡಳಿತ ಮಂಡಳಿಯ ಸದಸ್ಯರು ತಮ್ಮ ತನು ಮನ ಧನಗಳ ಮೂಲಕ ಶ್ರಮಿಸಿರುತ್ತಾರೆ.

Ad Widget . Ad Widget . Ad Widget .

ಇದು ಮುಂದೆ ಒಂದು ಉತ್ತಮ ವಿದ್ಯಾಸಂಸ್ಥೆಯಾಗಲು ಎಲ್ಲರ ಸಹಕಾರ ಅಗತ್ಯ ಎಂದು ನುಡಿದರು. ಸಂಸ್ಥೆಯ ಅಧ್ಯಕ್ಷರಾದ ವೆಂಕಟರಮಣ ಗೌಡ ಕಳುವಾಜೆ ಸಭಾಧ್ಯಕ್ಷತೆಯನ್ನು ವಹಿಸಿಕೊಟ್ಟು ಸಂಸ್ಥೆಯ ಸಂಚಾಲಕರಾದ ಎ.ವಿ. ನಾರಾಯಣ ಅತಿಥಿಯರಿಗೆ ಸ್ಮರಣಿಕೆ ನೀಡಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ಎವಿಜಿ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ನ ಉಪಕಾರ್ಯದರ್ಶಿ ಕೆ.ವಿ. ಪ್ರತಿಭಾ ದೇವಿ, ಉಪಾಧ್ಯಕ್ಷೆ ಕೆ.ವಿ. ಪುಷ್ಪಾವತಿ ಗೌಡ ಕಳುವಾಜೆ, ಕಾನೂನು ಸಲಹೆಗಾರರು ಟ.ಜಿ ದೀಕ್ಷಾ, ಹಾಗೂ ಸಂಸ್ಥೆಯ ಖಜಾಂಚಿ ವನಿತಾ ಎ.ವಿ, ನಿರ್ದೇಶಕರಾದ ಗಂಗಾಧರ ಗೌಡ ಎ.ವಿ, ಗೌರಿ ಬನ್ನೂರು, ಸೀತಾರಾಮ ಪೂಜಾರಿ ಮೇಲ್ಮಜಲು, ಸಂಸ್ಥೆಯ ಸಹಾಯಕರಾದ ನಾರಾಯಣ ಕುಲಾಲ್ ಮತ್ತು ಭುವನೇಶ್ವರಿ, ಹಾಗೂ ಮಕ್ಕಳ ಪೋಷಕರು ಉಪಸ್ಥಿತಿಯಲ್ಲಿದ್ದರು.

ಶಾಲೆಯ ಪುಟಾಣಿಯರಾದ ಅನಿಕ, ವಿನೀಶ್, ಗಯನ್, ತನಿಷ್ಕ ಮತ್ತು ಆನ್ವಿ ಇವರು ಪ್ರಾರ್ಥನೆ ನಡೆಸಿದರು, ಸಂಸ್ಥೆಯ ಶಿಕ್ಷಕಿಯಾದ ಯಶುಭ ರೈ ಇವರು ಸಂವಿಧಾನದ ಪೂರ್ವ ಪೀಠಿಕೆಯನ್ನು ವಾಚಿಸಿದರು, ಸಂಸ್ಥೆಯ ಕಛೇರಿ ಸಿಬ್ಬಂದಿ ವನಿತಾ ಇವರು ಅತಿಥಿಯರನ್ನು ಸ್ವಾಗತಿಸಿದರು, ಸಂಸ್ಥೆಯ ಉಪಾಧ್ಯಕ್ಷರಾದ ಉಮೇಶ್ ಮಳುವೇಲು ವಂದಿಸಿದರು. ಸಂಸ್ಥೆಯ ಪ್ರಾಂಶುಪಾಲರಾದ ಉಷಾಕಿರಣ ಕೆ.ಎಸ್ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.

Leave a Comment

Your email address will not be published. Required fields are marked *