ಸಮಗ್ರ ನ್ಯೂಸ್:ನಲ್ಲೂರು ತೋಟದ ಕೂಲಿ ಕಾರ್ಮಿಕ ವಿಜಯ್ ಕುಮಾರ್ ಅವರ ಮೇಲೆ ಜು 26ರಂದು ಕಾಡಾನೆ ದಾಳಿಯಾಗಿದೆ. ಅವರನ್ನು ಮೈಸೂರು ಅಪೋಲೋ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂಥರ್ ಗೌಡ ಅವರು ಅಂದೇ ರಾತ್ರಿ 12 ಗಂಟೆಗೆ ಮೈಸೂರಿನ ಆಸ್ಪತ್ರೆಗೆ ಆಗಮಿಸಿ ಗಾಯಳು ಯೋಗ ಕ್ಷೇಮ ವಿಚಾರಿಸಿ ಗಾಯಾಳುವಿಗೆ ಧೈರ್ಯ ತುಂಬಿದರು.
ರೋಗಿಯ ಕುಟುಂಬಸ್ಥರಿಗೆ ಬೆಟ್ ಶಿಟ್ ಮೂಲಕ ಊಟದ ವ್ಯವಸ್ಥೆ ಮಾಡುವ ಮೂಲಕ ಸ್ಪಂದನೆ ನೀಡಿದರಲ್ಲದೆ, ತುರ್ತು ಚಿಕಿತ್ಸೆಗೆ ರೂ. 10 ಸಾವಿರ ನಗದನ್ನು ನೀಡಿದರು.
ದಾಳಿಗೆ ವಿಜಯ ಕುಮಾರ್ ಅವರಿಗೆ ಶ್ವಾಸಕೋಶದ ಭಾಗದಲ್ಲಿ ಪೆಟ್ಟಾಗಿದ್ದು, ಚಿಕಿತ್ಸೆಯ ಮೂಲಕ ಗುಣಮುಖರಾಗಲಿದ್ದಾರೆ. ಯಾವುದೇ ಆತಂಕಕ್ಕೆ ಒಳಗಾಗಬೇಕಿಲ್ಲ ಎಂದು ಕುಟುಂಬಸ್ಥರಿಗೆ ಧೈರ್ಯ ತುಂಬಿದರು.