ಕಾರ್ಕಳ:ಬಸ್ಸು, ಟಿಪ್ಪರ್ ನಡುವೆ ಅಪಘಾತ|ಬಸ್ಸು ಚಾಲಕ ಗಂಭೀರ

ಸಮಗ್ರ ನ್ಯೂಸ್: ಕಾರ್ಕಳದ ಬೈಲೂರು ಸಮೀಪದ ಜಾರ್ಕಳ ಬಸ್ರಿಶಾಲೆಯ ರಾಜ್ಯ ಹೆದ್ದಾರಿ ಯಲ್ಲಿ ಬಸ್ಸು ಹಾಗೂ ಟಿಪ್ಪರ್ ನಡುವೆ ಅಪಘಾತ ಸಂಭವಿಸಿದ್ದು, ಬಸ್ಸು ಚಾಲಕ ಗಂಭೀರ ಗಾಯಗೊಂಡ ಘಟನೆ ಸೋಮವಾರ ಸಂಭವಿಸಿದೆ.

Ad Widget ... ..

ಉಡುಪಿ ಯಿಂದ ಕಾರ್ಕಳ ಕಡೆ ಬರುತ್ತಿದ್ದ ಖಾಸಗಿ ಬಸ್ಸೊಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ( ಕೆ ಎಸ್ ಆರ್ ಟಿ ಸಿ) ಬಸ್ಸನ್ನು ಹಿಂತಿಕುವ ಭರದಲ್ಲಿ ಅತೀ ವೇಗ ಹಾಗೂ ನಿರ್ಲಕ್ಷ್ಯ ರೀತಿಯಲ್ಲಿ ಚಲಾಯಿಸಿ ಬಂದು ಬಸ್ರಿಶಾಲಾ ತಿರುವಿನಲ್ಲಿ ಟಿಪ್ಪರ್ ಗೆ ಡಿಕ್ಕಿ ಹೊಡೆದಿತ್ತು.

Ad Widget

ಅಪಘಾತದ ತೀವ್ರತೆಗೆ ಬಸ್ಸು ಚಾಲಕ ಗಂಭೀರ ಸ್ವರೂಪದಲ್ಲಿ ಗಾಯಗೊಂಡಿದ್ದು, ಕಾಲಿನ ಮೂಳೆ ಮುರಿತಕ್ಕೊಳಗಾಗಿದೆ. ಪ್ರಯಾಣಿಕರು ಹಾಗೂ ಟಿಪ್ಪರ್ ಚಾಲಕ ಸಣ್ಣಪುಟ್ಟ ರೀತಿಯಲ್ಲಿ ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಕಾರ್ಕಳ ನಗರ ಪೊಲೀಸರು ಅಗಮಿಸಿದ್ದಾರೆ.

Leave a Comment

Your email address will not be published. Required fields are marked *