ವಿಟ್ಲ: ಪೆರುವಾಯಿ ಕೋಳಿ ಅಂಕಕ್ಕೆ ಧಾಳಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್|ಯುವಕನ ಮೇಲೆ ಕಿಡಿಗೇಡಿಗಳಿಂದ ಹಲ್ಲೆ: ಆಸ್ಪತ್ರೆಗೆ ದಾಖಲು

ಸಮಗ್ರ ನ್ಯೂಸ್: ಯುವಕನೊಬ್ಬನಿಗೆ ಯುವಕರ ತಂಡವೊಂದು ಹಲ್ಲೆ ನಡೆಸಿದ ಘಟನೆ ವಿಟ್ಲದ ಕಾವೇರಿ ಬಾರ್‌ನಲ್ಲಿ ನಿನ್ನೆ ರಾತ್ರಿ ನಡೆದಿದೆ.

Ad Widget ... ..

ಪೆರುವಾಯಿಯಲ್ಲಿ ಗ್ರಾಮ ಪಂಚಾಯತ್ ಸದಸ್ಯ ವರುಣ್ ರೈ ಅಂತರಗುತ್ತು ನೇತೃತ್ವದಲ್ಲಿ ರಾಜಾರೋಷವಾಗಿ ನಡೆಯುತ್ತಿದ್ದ ಅಕ್ರಮ ಕೋಳಿ ಅಂಕಕ್ಕೆ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಧಾಳಿ ಮಾಡಿದ್ದು ಈ ವಿಚಾರವಾಗಿ ನಿನ್ನೆ ರಾತ್ರಿ ಬಾರ್‌ನಲ್ಲಿ ಯುವಕರ ನಡುವೆ ಮಾತಿನ ಚಕಾಮಕಿ ಬೆಳೆದಿದೆ.

Ad Widget

ಹಲ್ಲೆಗೊಳಗಾದ ಸುರೇಶ್ ಗಂಭೀರ ಗಾಯಗೊಂಡಿದ್ದು ಕೂಡಲೇ ವಿಟ್ಲ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿನ ಆಸ್ಪತ್ರೆಗೆ ದಾಖಲಿಸಿ ಬಳಿಕ ತಲೆಗೆ ಗಂಭೀರ ಗಾಯ ಗೊಂಡ ಕಾರಣ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *