ಕಾರ್ಕಳ ಎಪಿಎಂಸಿ ಅಧ್ಯಕ್ಷ ಕೊರೊನಾಗೆ ಬಲಿ

ಕಾರ್ಕಳ: ಕಾರ್ಕಳದ ಎಪಿಎಂಸಿ ಅಧ್ಯಕ್ಷ ಮೋಹನ್ ದಾಸ್ ಶೆಟ್ಟಿ (65) ಅವರು ಕೋವಿಡ್ ಗೆ ಬಲಿಯಾಗಿದ್ದಾರೆ.

Ad Widget ... ..

ಬೆಳ್ಮಣ್ಣ್ ಶಾಲೆ ಬಳಿಯ ನಿವಾಸಿ ಯಾಗಿದ್ದ ಇವರಿಗೆ ಕೆಲ ದಿನಗಳ ಹಿಂದೆ ಕೋವಿಡ್ ಪಾಸಿಟಿವ್ ಬಂದಿತ್ತು. ಆ ಬಳಿಕ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಇ ವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಬೆಳ್ಮಣ್ ರೋಟರಿ ಕ್ಲಬ್ ನ ಕ್ರಿಯಾಶೀಲ ಸದಸ್ಯರಾಗಿದ್ದ ಇವರು, ನಂದಳಿಕೆ ಬೋರ್ಡ್ ಶಾಲೆ, ಬೆಳ್ಮಣ್ ಸರಕಾರಿ ಪ್ರೌಢಶಾಲೆಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ಪ್ರಸ್ತುತ ಕಾರ್ಕಳ ಎಪಿಎಂಸಿ ಅಧ್ಯಕ್ಷರಾಗಿದ್ದ ಮೋಹನ್ ದಾಸ್ ಬಿಜೆಪಿ ಬೆಳ್ಮಣ್ ಘಟಕದ ಮಾಜಿ ಸ್ಥಾನೀಯ ಸಮಿತಿ ಅಧ್ಯಕ್ಷರಾಗಿದ್ದರು.

Ad Widget

Leave a Comment

Your email address will not be published. Required fields are marked *