Ad Widget .

KAR TET-2023: ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಗೆ ಅರ್ಜಿ ಆಹ್ವಾನ

ಸಮಗ್ರ ನ್ಯೂಸ್: 2023ರ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (KARTET-2023)ಗೆ ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಈ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆಯು, ಟಿಇಟಿ ಪರೀಕ್ಷೆಗೆ ಅರ್ಜಿ ಸಲ್ಲಿಸುವ ದಿನಾಂಕ, ಪರೀಕ್ಷಾ ದಿನಾಂಕ ಮತ್ತು ಇನ್ನಿತರ ಮಾಹಿತಿಯನ್ನು ನೀಡಿದೆ.‌

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಅರ್ಜಿ ಸಲ್ಲಿಸಲು ಬಯಸುವ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನಿಗದಿತ ಶುಲ್ಕದೊಂದಿಗೆ ಶಾಲಾ ಶಿಕ್ಷಣ ಇಲಾಖೆ ಅಧಿಕೃತ ವೆಬ್‌ಸೈಟ್ https://www.schooleducation.kar.nic.in ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ದಿನಾಂಕ 14-07-2023 ರಿಂದ 15-08-2023 ರವರೆಗೆ ಅವಕಾಶ ಕಲ್ಪಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಟಿಇಟಿ-2022ರ ಪರೀಕ್ಷೆಗೆ ಆನ್‌ಲೈನ್‌ (Online) ಮೂಲಕ ಅರ್ಜಿ ಸಲ್ಲಿಕೆ ದಿನಾಂಕ 14-07-2023 ಆರಂಭವಾಗಿದ್ದು, ಅರ್ಜಿ ಶುಲ್ಕ, ವಯೋಮಿತಿ ಸೇರಿದಂತೆ ಮಾಹಿತಿಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಾಲತಾಣಕ್ಕೆ ಭೇಟಿ ನೀಡಿ ಮಾಹಿತಿ ಪಡೆಯುವಂತೆ ಸೂಚಿಸಲಾಗಿದೆ.
ಕರ್ನಾಟಕ – ಶಿಕ್ಷಕರ ಅರ್ಹತಾ ಪರೀಕ್ಷೆ-2023ಕ್ಕೆ, ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ದಿನಾಂಕ 14-07-2023 ರಿಂದ 15-08-2023 ಒಳಗಾಗಿ ಇಲಾಖಾ ವೆಬ್‌ಸೈಟ್‌ https://www.schooleducation.kar.nic.in ಮೂಲಕ ಸಲ್ಲಿಸಬೇಕು.
ಶುಲ್ಕ ವಿವರ: ಸಾಮಾನ್ಯವರ್ಗ, 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ- ಪತ್ರಿಕೆ-1 ಅಥವಾ ಪತ್ರಿಕೆ-2 ಮಾತ್ರ- 700 ರೂ. ಪತ್ರಿಕೆ-1 ಹಾಗೂ ಪತ್ರಿಕೆ-2 1000 ರೂ..
ಪ.ಜಾ/ಪ.ಪಂ/ ಪ್ರವರ್ಗ-1 ಅಭ್ಯರ್ಥಿಗಳಿಗೆ – ಪತ್ರಿಕೆ-1 ಅಥವಾ ಪತ್ರಿಕೆ-2 ಮಾತ್ರ- 350 ರೂ. ಪತ್ರಿಕೆ-1 ಹಾಗೂ ಪತ್ರಿಕೆ-2 500 ರೂ.
ವಿಶೇಷ ಅಗತ್ಯಯುಳ್ಳ ಅಭ್ಯರ್ಥಿಗಳಿಗೆ ಪರೀಕ್ಷಾ ಶುಲ್ಕ ದಿಂದ ವಿನಾಯಿತಿ ಇರುತ್ತದೆ.
KAR-TET 2023 ಪ್ರವೇಶ ಪತ್ರ ಬಿಡುಗಡೆ ದಿನಾಂಕ : 23-08-2023.
KAR-TET 2022 ಪರೀಕ್ಷಾ ದಿನಾಂಕ : 03-09-2023
ಪತ್ರಿಕೆ-1 – ಬೆಳಗ್ಗೆ 9:30 ರಿಂದ ಮಧ್ಯಾಹ್ನ 12 ಗಂಟೆ
ಪತ್ರಿಕೆ-2 – ಮಧ್ಯಾಹ್ನ 2 ರಿಂದ 4:30

Ad Widget . Ad Widget . Ad Widget .

ಆನ್‌ಲೈನ್ ಅರ್ಜಿ ಸಲ್ಲಿಸಲು ಹೀಗೆ ಮಾಡಬಹುದು.
ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ಇಲಾಖಾ ವೆಬ್‌ಸೈಟ್ ನಲ್ಲಿ ನೀಡಲಾಗಿರುವ ಸೂಚನೆಗಳನ್ನು ಓದಬೇಕು.
‘Registration ‘Login’ ನೊಂದಿಗೆ ಆನ್‌ಲೈನ್ ಅರ್ಜಿಯನ್ನು ಪೂರ್ಣ ವಿವರಗಳೊಂದಿಗೆ ಭರ್ತಿ ಮಾಡುವುದು.
ಸ್ಕ್ಯಾನ್ ಮಾಡಿದ ಅಭ್ಯರ್ಥಿಯ ಭಾವಚಿತ್ರ (50KB ಕ್ಕಿಂತಲೂ ಕಡಿಮೆ) ಹಾಗೂ ಸಹಿಯನ್ನು (40KB ಕ್ಕಿಂತಲೂ ಕಡಿಮೆ) ಅಪ್‌ಲೋಡ್‌ ಮಾಡಬೇಕು.
ಪರೀಕ್ಷಾ ಶುಲ್ಕವನ್ನು Internet Banking /debit Card/ Credit Card/ UPI ಅಥವಾ ಬ್ಯಾಂಕ್ ಚಲನ್ (ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕಿನಲ್ಲಿ ಮಾತ್ರ ಚಲನ್ ಮೂಲಕ ಶುಲ್ಕ ಪಾವತಿಸುವುದು) ಮೂಲಕವೇ ಪಾವತಿಸಬೇಕು.
ಪಾವತಿಸಿದ ಪರೀಕ್ಷಾ ಶುಲ್ಕವನ್ನು ಮರುಪಾವತಿ ಮಾಡುವುದಿಲ್ಲ. ಅಥವಾ ಮುಂದಿನ ಪರೀಕ್ಷೆಗಳಿಗೆ ಹೊಂದಾಣಿಕೆ ಮಾಡಲಾಗುವುದಿಲ್ಲ.
INTERNET Crash ಅನ್ನು ತಪ್ಪಿಸಲು ನಿಗದಿಪಡಿಸಿದ ಕೊನೆಯ ದಿನಾಂಕದವರೆಗೂ ಕಾಯದೇ ಮುಂಚಿತವಾಗಿ ಅರ್ಜಿ ಸಲ್ಲಿಸುವುದು.
ಅಭ್ಯರ್ಥಿಗಳು ತಮ್ಮ ಆನ್‌ಲೈನ್‌ ಅರ್ಜಿಗಳನ್ನು https://www.schooleducation.kar.nic.in
ವೆಬ್‌ಸೈಟ್ ಮೂಲಕ ಶುಲ್ಕ ಪಾವತಿಸಿದ ನಂತರ, ಅಭ್ಯರ್ಥಿಗಳ User name and Password ಬಳಸಿ ಡೌನ್‌ಲೋಡ್ ಮಾಡಿಕೊಳ್ಳುವುದು. ಅರ್ಜಿ ಶುಲ್ಕ ಪಾವತಿಯಾದ ಎರಡು ದಿನಗಳ ನ೦ತರದಲ್ಲೂ ಪೇಮೆಂಟ್ ಸ್ಟೇಟಸ್ ಪೆಂಡಿಂಗ್ ಎಂದು ಕಂಡುಬಂದಲ್ಲಿ ಕೇಂದ್ರೀಕೃತ ದಾಖಲಾತಿ ಘಟಕವನ್ನು ಸಂಪರ್ಕಿಸುವುದು.
ಅಭ್ಯರ್ಥಿಗಳು ಡೌನ್‌ಲೋಡ್ ಮಾಡಲಾದ ತಮ್ಮ ಆನ್‌ಲೈನ್ ಅರ್ಜಿಯನ್ನು ತಮ್ಮ ಬಳಿ ಕಡ್ಡಾಯವಾಗಿ ಇರಿಸಿಕೊಳ್ಳುವುದು. ಅಭ್ಯರ್ಥಿಗಳು ಆನ್‌ಲೈನ್ ಅರ್ಜಿಯಲ್ಲಿ ನೀಡಿರುವ ಮಾಹಿತಿಯಲ್ಲಿ ಏನಾದರೂ ತಿದ್ದುಪಡಿ ಮಾಡಬೇಕಾದಲ್ಲಿ ಪರೀಕ್ಷಾ ಶುಲ್ಕ ಪಾವತಿಸುವುದಕ್ಕಿಂತ ಮೊದಲು ಮಾಡಬೇಕಾಗುತ್ತದೆ. ನಂತರ ಅವಕಾಶ ಇರುವುದಿಲ್ಲ.
ಅರ್ಜಿಯನ್ನು ಸಲ್ಲಿಸಿದ ನಂತರ ಅಭ್ಯರ್ಥಿಯ ಮಾಹಿತಿಯಲ್ಲಿ ಯಾವುದೇ ವ್ಯತ್ಯಾಸವಿದ್ದಲ್ಲಿ ಅದರಿಂದ ಉಂಟಾಗುವ ಪರಿಣಾಮಗಳಿಗೆ ಅಭ್ಯರ್ಥಿಗಳೇ ಜವಾಬ್ದಾರರಾಗಿರುತ್ತಾರೆ ಎಂದು ತಿಳಿಸಲಾಗಿದೆ.
KARTET-2023 ಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಉಪಯೋಗದಲ್ಲಿರುವಂತಹ ತಮ್ಮ ಸ್ವಂತ ಮೊಬೈಲ್‌ನ ಸಂಪರ್ಕ ಸಂಖ್ಯೆಯನ್ನು ಹಾಗೂ ಇ-ಮೇಲ್ ಐಡಿಯನ್ನು ಆನ್‌ಲೈನ್ ಅರ್ಜಿಯಲ್ಲಿ ಕಡ್ಡಾಯವಾಗಿ ನಮೂದಿಸುವುದು.

Leave a Comment

Your email address will not be published. Required fields are marked *