Ad Widget .

ಕೊಡಗು: ಮಾನಸಿಕ ಅಸ್ವಸ್ಥ ಮಹಿಳೆಯನ್ನು ಅನಾಥಾಶ್ರಮಕ್ಕೆ ಸೇರಿಸಿದ ಕರವೇ ಸಂಘಟನೆ

ಸಮಗ್ರ ನ್ಯೂಸ್: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆ ಗ್ರಾಮ ಪಂಚಾಯತ್ ಬಸ್ ನಿಲ್ದಾಣದಲ್ಲಿ ಮಾನಸಿಕವಾಗಿ ಅಸ್ವಸ್ಥಗೊಂಡ ಮಹಿಳೆಯೊಬ್ಬರು ಕಳೆದ ಒಂದು ವರ್ಷದಿಂದ ಬಸ್ ನಿಲ್ದಾಣದಲ್ಲಿ ಮಲಗುತ್ತಿದ್ದುದಲ್ಲದೆ ಜನರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದ ಮಹಿಳೆಯನ್ನು ಗ್ರಾಮ ಪಂಚಾಯತ್ ಸಹಕಾರದೊಂದಿಗೆ ಕರವೇ ಸಂಘಟನೆ ಸೇರಿಕೊಂಡು ಅನಾಥಾಶ್ರಮಕ್ಕೆ ಸೇರಿಸಲಾಗಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಮಹಿಳೆಯೊಬ್ಬರು ಜನರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದನ್ನು ಅರಿತ ಕೊಡ್ಲಿಪೇಟೆ ಜನರು ಗ್ರಾಮ ಪಂಚಾಯತ್‌ಗೆ ಮನವಿ ಸಲ್ಲಿಸಿದ್ದರು. ಇದರಿಂದ ಕೊಡ್ಲಿಪೇಟೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ಕರವೇ ತಾಲೂಕು ಅಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜ ರವರನ್ನು ಫೋನ್ ಮುಖಾಂತರ ಸಂಪರ್ಕಿಸಿ ಈ ಮಾನಸಿಕ ಅಸ್ವಸ್ಥ ಮಹಿಳೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಹಾಗೂ ಅನಾಥಾಶ್ರಮಕ್ಕೆ ಸೇರಿಸಿ ಕೊಡಬೇಕೆಂದು ಕೇಳಿಕೊಂಡರು. ಅದರಂತೆ ಈ ಬಸ್ ನಿಲ್ದಾಣದಲ್ಲಿದ್ದ ಮಹಿಳೆಯನ್ನು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹಾಗೂ ಗ್ರಾಮ ಪಂಚಾಯತಿ ಸದಸ್ಯರ ಸಮ್ಮುಖದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಕರವೇ ಫ್ರಾನ್ಸಿಸ್ ಡಿಸೋಜಾ ರವರು ಖುದ್ದಾಗಿ ಹೋಗಿ ಆ ಮಾನಸಿಕ ಅಸ್ವಸ್ಥ ಮಹಿಳೆಯರನ್ನು ಬೆಂಗಳೂರಿನ ಆಟೋ ರಾಜ ಅನಾಥಾಶ್ರಮಕ್ಕೆ ಸೇರಿಸಲಾಯಿತ್ತು.

Ad Widget . Ad Widget . Ad Widget .

ಈ ಮಹಿಳೆಯನ್ನು ಕರೆದುಕೊಂಡು ಹೋಗುವಾಗ ತುಂಬಾ ಹರ ಸಾಹಸದಿಂದ ಕರೆದುಕೊಂಡು ಹೋಗಿ ಮಹಿಳೆಯನ್ನು ಬಸ್ ನಿಲ್ದಾಣದಿಂದ ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಕರವೇ ಫ್ರಾನ್ಸಿಸ್ ಡಿಸೋಜ ಅವರಿಗು ಸಹ ಹೊಡೆಯಲು ಬಂದಿದ್ದರು. ಆದರೆ, ಇವರು ಮಾನಸಿಕ ಅಸ್ವಸ್ಥೆ ಆಗಿರುವ ಕಾರಣ ಇವರಿಗೆ ಏನು ಮಾಡುತ್ತಿದ್ದಾರೆಂದು ಅವರ ವಿಮೋಚನೆಗೆ ಬಾರದ ಕಾರಣ ಹೀಗೆ ಮಾಡುತ್ತಿದ್ದರು. ಹಾಗಾಗಿ, ಜನರಿಗೆ ತೊಂದರೆ ಉಂಟು ಮಾಡುತ್ತಿದ್ದ ಮಹಿಳೆಯನ್ನು ಬೆಂಗಳೂರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಹಾಗೂ ಅನಾಥಾಶ್ರಮಕ್ಕೆ ಕರವೇ ಫ್ರಾನ್ಸಿಸ್ ಡಿಸೋಜ ಅವರು ಖುದ್ದಾಗಿ ಕರೆದೊಯ್ದರು. ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತ್‌ಯಿಂದ ಬೆಂಗಳೂರಿಗೆ ಹೋಗಲು ಪೌರಕಾರ್ಮಿಕರಾದ ಕಾಂತರಾಜ್ ರವರು ಸಹ ನಮ್ಮ ಜೊತೆ ಬಂದಿದ್ದರು. ಈ ಅಸ್ವಸ್ಥ ಮಹಿಳೆಯನ್ನು ಬೆಂಗಳೂರಿನ ಅನಾಥಾಶ್ರಮಕ್ಕೆ ಸೇರಿಸಲು ಕಾರಿನ ವ್ಯವಸ್ಥೆ ಸಹ ಗ್ರಾಮ ಪಂಚಾಯಿತಿಯಿಂದ ಮಾಡಿಸಿಕೊಟ್ಟಿದ್ದರು.

ಈ ಸಂದರ್ಭದಲ್ಲಿ ಕರವೇ ಸೋಮವಾರಪೇಟೆ ತಾಲೂಕು ಅಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜ ಮತ್ತು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಹರೀಶ್ ಹಾಗೂ ಗ್ರಾಮಪಂಚಾಯತಿ ಸದಸ್ಯರಾದ ಶೇಖರ್, ನಂದೀಶ್, ಪ್ರಸನ್ನ, ಲಾವಣ್ಯ ಧರ್ಮಪ್ರಕಾಶ್ ಹಾಗೂ ಬ್ಯಾಡ್ ಗೊಟ್ಟ ಗ್ರಾಮ ಪಂಚಾಯಿತಿ ಸದಸ್ಯರಾದ ಹನೀಪ್ ಮತ್ತು ಬ್ಯಾಡ್ ಗೊಟ್ಟ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಭವನ, ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ದೀಪಕ್, ಆಶಾ ಮತ್ತು ಕಾರ್ಯಕರ್ತರಾದ ತ್ರಿವೇಣಿ, ಕೊಡ್ಲಿಪೇಟೆ ಪೌರಕಾರ್ಮಿಕರಾದ ಕಾಂತರಾಜ್ ಹಾಗೂ ಕಾರು ಚಾಲಕ ರಾಮ ಅವರು ಈ ಸಂದರ್ಭದಲ್ಲಿ ಸಹಕರಿಸಿದರು.

ಇಂತಹ ಮಾನಸಿಕ ಅಸ್ವಸ್ಥರು, ವೃದ್ಧರು, ಅನಾಥರು ಬಸ್ ನಿಲ್ದಾಣದಲ್ಲಿ ಕಂಡುಬಂದಲ್ಲಿ ನಮಗೆ ತಿಳಿಸಬಹುದು. ಅಂತಹವರನ್ನು ಕರೆದುಕೊಂಡು ಹೋಗಿ ಅನಾಥಾಶ್ರಮಕ್ಕೆ ಬಿಡುವ ಕೆಲಸ ಮಾಡಲಾಗುವುದು.
ಅಧ್ಯಕ್ಷರು ಕರ್ನಾಟಕ ರಕ್ಷಣಾ ವೇದಿಕೆ ಸೋಮವಾರಪೇಟೆ ತಾಲ್ಲೂಕು ೯೬೮೬೦೯೫೮೩೧ ಮತ್ತು ೯೪೪೯೨೫೫೮೩೧

Leave a Comment

Your email address will not be published. Required fields are marked *