ಕಾರ್ಕಳ: ಕಚೇರಿಯಲ್ಲೇ ಮಹಿಳಾ ಸಿಬಂದಿ ಆತ್ಮಹತ್ಯೆ

ಸಮಗ್ರ ನ್ಯೂಸ್: ಖಾಸಗಿ ಸಂಸ್ಥೆಯ ಮಹಿಳಾ ಸಿಬ್ಬಂದಿ ತಾನು ಕೆಲಸ ಮಾಡುತ್ತಿದ್ದ ಕಚೇರಿಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜು. 14ರಂದು ಕಾರ್ಕಳದಲ್ಲಿ ನಡೆದಿದೆ.

Ad Widget ... ..

ನಗರದ ಮಾರ್ಕೆಟ್‌ ಬಳಿಯ ನಿವಾಸಿ, ವಿವಾಹಿತೆ ಪ್ರಮೀಳಾ ದೇವಾಡಿಗ (32) ಅವರು ಕಾರ್ಕಳ ಪೇಟೆಯ ಮಾರ್ಕೆಟ್‌ ರಸ್ತೆಯಲ್ಲಿರುವ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಇತರ ಸಿಬ್ಬಂದಿಗಳು ಬೆಳಗ್ಗೆ ಕರ್ತವ್ಯಕ್ಕೆ ಹಾಜರಾದ ಸಂದರ್ಭದಲ್ಲಿ ಪ್ರಮೀಳಾ ನೇಣು ಬಿಗಿದಿರುವುದು ಕಂಡು ಬಂದಿದೆ. ಅವರು ನೇಣು ಬಿಗಿಯಲು ಮನೆಯಿಂದಲೇ ಸೀರೆ ತಂದಿರಬೇಕು ಎಂದು ಶಂಕಿಸಲಾಗಿದ್ದು, ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದರು. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ad Widget

Leave a Comment

Your email address will not be published. Required fields are marked *