ಕುಶಾಲನಗರ:ಅಕ್ರಮವಾಗಿ ಮಾದಕ ವಸ್ತುಗಳ ಮಾರಾಟಕ್ಕೆ ಯತ್ನ | ನಾಲ್ವರ ಬಂಧನ

ಸಮಗ್ರ ನ್ಯೂಸ್: ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆ ಸರಹದ್ದಿನಲ್ಲಿ ಅಕ್ರಮವಾಗಿ ಮಾದಕ ವಸ್ತುಗಳನ್ನು ಮಾರಾಟ ಮಾಡಲು ಯತ್ನಿಸುತಿದ್ದ ನಾಲ್ವರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿ ಒಂದು ಕೆಜಿ 160 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

Ad Widget ... ..

ಹೊಸ ತೋಟ ನಿವಾಸಿಗಳಾದ ಕೆ.ಎಚ್ ಫೈಸಲ್, ಶರೀಫ್, ಗೋಂದಿ, ಬಸವನಹಳ್ಳಿ ನಿವಾಸಿ ಜೆ.ಎ.ಶಶಿಕುಮಾರ್, ಗುಡ್ಡೆ ಹೊಸೂರು ನಿವಾಸಿ ವಿನೀತ್, ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳಿಂದ 6.5 ಗ್ರಾಂ ಎಂಡಿಎಂಎ ಮಾರಕ ಟ್ಯಾಬ್ಲೆಟ್ಸ್ ಅನ್ನು ಕೂಡ ವಶಪಡಿಸಿಕೊಂಡಿದ್ದಾರೆ.

Ad Widget

ಜಿಲ್ಲಾಧ್ಯಂತ ಇಂತಹ ಮಾರಕ ವಸ್ತುಗಳನ್ನು ಸೇವಿಸುವರು ಮಾರಾಟ ಮಾಡುವವರು ಕಂಡು ಬಂದರೆ, ಕೂಡಲೇ ಪೊಲೀಸರಿಗೆ ಸುದ್ದಿ ಮುಟ್ಟಿಸುವಂತೆ ಪೋಲಿಸ್ ಇಲಾಖೆಯು ಕೋರಿ ಕೊಂಡಿದೆ. ಕುಶಾಲನಗರ ಗ್ರಾಮಾಂತರ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Leave a Comment

Your email address will not be published. Required fields are marked *